alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರ ಸ್ವಾತಂತ್ರ್ಯೋತ್ಸವದ ಡ್ರೆಸ್ ಕೋಡ್ ಗಮನಿಸಿದ್ರಾ…?

ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾದಾ ಸೀದಾ ವೇಷ ಭೂಷಣದೊಂದಿಗೆ ಯಾವಾಗ್ಲೂ ಜನರ ಮಧ್ಯೆ ಗುರುತಿಸಿಕೊಂಡವರು. ಆದ್ರೆ ಕೆಲವು ವಿಶೇಷ ಸಂದರ್ಭಗಳಲ್ಲಿ ನಮೋ ಆ ಸರಳತೆಗೊಂದು ಮೆರುಗು ತಂದುಕೊಡುವಂತಾ ವಸ್ತ್ರ ವೈವಿಧ್ಯತೆಯಲ್ಲಿ ಕಾಣಿಸಿಕೊಳ್ತಾರೆ.

ಇಂದು ನಿನ್ನೆಯಿಂದ ನಮೋ ಈ ವಸ್ತ್ರ ಸಂಹಿತೆಯನ್ನು ಪಾಲಿಸ್ತಿಲ್ಲ. ಪ್ರಧಾನಿಯಾಗಿ 2014ರಲ್ಲಿ ಮೊದಲ ಬಾರಿಗೆ ಕೆಂಪು ಕೋಟೆಯಲ್ಲಿ ನಿಂತ ಕ್ಷಣದಿಂದಲೂ ಮೋದಿ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಾರಂಭಗಳಲ್ಲಿ ಬಹುತೇಕ ಏಕ ಪ್ರಕಾರದ ಧಿರಿಸು ಧರಿಸುತ್ತಿದ್ದಾರೆ.

ಹಾಫ್ ಸ್ಲೀವ್ ಕುರ್ತಾ, ಪೈಜಾಮ, ಅದ್ರ ಮೇಲೊಂದು ಕೋಟ್ ನ್ನ ನಮೋ ಧರಿಸೋದು ಕಾಮನ್. ಆದ್ರೆ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಮೋದಿ ಈ ವಸ್ತ್ರ ಸಂಹಿತೆಗೆ ಪಗಡಿಯನ್ನ ಆಡ್ ಆನ್ ಮಾಡ್ತಾರೆ. ಗಣರಾಜ್ಯೋತ್ಸವ ಸಂದರ್ಭವೊಂದರಲ್ಲಿ ಮೋದಿ ಭಂದಗಲಾ ಸೂಟ್, ಬೂದಿ ಮತ್ತು ಕಂದು ಬಣ್ಣದ ಜಾಕೆಟ್ ಮತ್ತು ನೆಹರು ಕೋಟ್ ಗಳೊಂದಿಗೂ ಗಮನ ಸೆಳೆದಿದ್ದಾರೆ.

2014 ರಿಂದ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮೋದಿ ತಲೆ ಮೇಲೆ ಪಗಡಿ ಇಲ್ಲದೆ ಕಾಣಿಸಿಕೊಂಡಿಲ್ಲ. ಆ ಪಗಡಿ ಬಹುತೇಕ ಕೆಂಪು ಇಲ್ಲವೇ ಕೇಸರಿ ಬಣ್ಣದ್ದಾಗಿರುತ್ತದೆ. ಇದರ ಹೊರತಾಗಿ ಮೋದಿ ತಿಳಿ ಹಸಿರು, ನೀಲಿ, ಹಳದಿ ಬಣ್ಣಗಳ ದಿರಿಸು ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮೋದಿಯವರ ಈ ಸ್ಟೈಲ್ ಸ್ಟೇಟ್ ಮೆಂಟ್ ಈಗ ಎಲ್ಲರಿಗೂ ಅಚ್ಚು ಮೆಚ್ಚಾಗಿಬಿಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...