alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

modi

ಉತ್ತರಪ್ರದೇಶದಲ್ಲಿ ನಿನ್ನೆ ನಡೆದ ಚುನಾವಣಾ ಸಮಾವೇಶದಲ್ಲಿ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದಿರುವ ಕಾಂಗ್ರೆಸ್, ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ. ಮೋದಿ ವಿರುದ್ಧ ದೂರು ದಾಖಲಿಸುವುದಾಗಿ ಕಾಂಗ್ರೆಸ್ ನ ಕೆ.ಸಿ. ಮಿತ್ತಲ್ ತಿಳಿಸಿದ್ದಾರೆ.

ಉತ್ತರಪ್ರದೇಶದ ಫತೇಪುರದಲ್ಲಿ ನಿನ್ನೆ ಮೋದಿ ಚುನಾವಣಾ ಭಾಷಣ ಮಾಡಿದ್ರು. ‘ಯಾವ ಸರ್ಕಾರವೂ ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಸಾರ್ವಜನಿಕರಲ್ಲಿ ಪಕ್ಷಪಾತ ಮಾಡಲು ಸಾಧ್ಯವಿಲ್ಲ. ರಂಜಾನ್ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಇದೆ ಅಂತಾದ್ರೆ ದೀಪಾವಳಿಯಲ್ಲೂ ಇರಲೇಬೇಕು. ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಜಾಗ ನೀಡಿದ್ರೆ, ಸಮಾಧಿಗೂ ಸ್ಥಳ ಕೊಡಬೇಕು. ಪಕ್ಷಪಾತ ಮಾಡುವಂತಿಲ್ಲ’ ಎಂದು ಮೋದಿ ಅಭಿಪ್ರಾಯಪಟ್ಟಿದ್ದರು.

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಅನ್ನೋದೇ ಸರ್ಕಾರದ ಮಂತ್ರ ಎಂದಿದ್ದರು. ಮೋದಿ ಸ್ಮಶಾನ ಹೇಳಿಕೆ ಆಕ್ಷೇಪಾರ್ಹ ಎಂದಿರುವ ಕಾಂಗ್ರೆಸ್ ದೂರು ನೀಡಲು ನಿರ್ಧರಿಸಿದೆ. ಕಳೆದ ವಾರ ಮೋದಿ ಹಾಗೂ ಬಿಜೆಪಿ ಅನುಮತಿ ಪಡೆಯದೆ ಉತ್ತರಾಖಂಡ್ ನಲ್ಲಿ ಸಮಾವೇಶ ನಡೆಸಿದ್ದು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...