alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಣಬ್ ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ ಮೋದಿ

pranab-modi-647_080317105816

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದ ವಿವರಗಳನ್ನು ಖುದ್ದು ಪ್ರಣಬ್ ಮುಖರ್ಜಿ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಪತ್ರದಲ್ಲಿ ಮೋದಿ ಬರೆದಿರುವ ಪ್ರತಿಯೊಂದು ಸಾಲುಗಳೂ ಹೃದಯಸ್ಪರ್ಷಿಯಾಗಿವೆ ಅಂತಾ ಹೇಳಿಕೊಂಡಿದ್ದಾರೆ.

‘ಪ್ರಣಬ್ ದಾ ನಮ್ಮ ರಾಜಕೀಯ ಪಯಣ ಬೇರೆ ಬೇರೆ ಪಕ್ಷಗಳಲ್ಲಿ ರೂಪುಗೊಂಡಿದೆ. ಸಿದ್ಧಾಂತಗಳು ಕೂಡ ಕೆಲವೊಮ್ಮೆ ಭಿನ್ನವಾಗಿದ್ದವು. ಆದ್ರೆ ನಿಮ್ಮ ಬುದ್ಧಿಶಕ್ತಿ ಮತ್ತು ಸೈದ್ಧಾಂತಿಕತೆಯಿಂದಾಗಿ ಜೊತೆಯಾಗಿ ಕೆಲಸ ಮಾಡಲು ಸಾಧ್ಯವಾಯಿತು.

ಮೂರು ವರ್ಷಗಳ ಹಿಂದೆ ಒಬ್ಬ ಹೊರಗಿನವನಾಗಿ ನಾನು ದೆಹಲಿಗೆ ಬಂದೆ. ನನ್ನೆದುರು ಬಹುದೊಡ್ಡ ಸವಾಲಿನ ಕೆಲಸವಿತ್ತು. ಆ ಸಮಯದಲ್ಲಿ ನೀವು ನನ್ನ ತಂದೆಯ ಸ್ಥಾನದಲ್ಲಿ ನಿಂತು, ಮಾರ್ಗದರ್ಶಕರಾಗಿ ಸಹಕಾರ ನೀಡಿದ್ದೀರಿ.

ನಿಮ್ಮ ಬುದ್ಧಿವಂತಿಕೆ, ಮಾರ್ಗದರ್ಶನ ಮತ್ತು ಕಾಳಜಿ ನನ್ನಲ್ಲಿ ಹೆಚ್ಚಿನ ವಿಶ್ವಾಸ ಮತ್ತು ಬಲವನ್ನು ತುಂಬಿದೆ. ನೀವು ಜ್ಞಾನದ ಭಂಡಾರವಿದ್ದಂತೆ. ನಿಮ್ಮ ಬೌದ್ಧಿಕ ಪರಾಕ್ರಮ ನನಗೆ ಮತ್ತು ಸರ್ಕಾರಕ್ಕೆ ನಿರಂತರ ಸಹಕಾರ ನೀಡಿದೆ’ ಅಂತಾ ಮೋದಿ ಪತ್ರದಲ್ಲಿ ಬರೆದಿದ್ದಾರೆ.

ಈ ಪತ್ರವನ್ನು ಪ್ರಣಬ್ ಮುಖರ್ಜಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಮೋದಿ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ನಿಮ್ಮ ಮಾರ್ಗದರ್ಶನ ಮುಂದೆಯೂ ಹೀಗೆ ಇರಲಿ ಅಂತಾ ಕೇಳಿಕೊಂಡಿದ್ದಾರೆ.

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...