alex Certify
ಕನ್ನಡ ದುನಿಯಾ       Mobile App
       

Kannada Duniya

ಅನಾವರಣವಾಯ್ತು ವಿಶ್ವದ ಎತ್ತರದ ಶಿವನ ಪ್ರತಿಮೆ

adiyogi-shiva-statueಕೊಯಂಬತ್ತೂರು: ಕೊಯಂಬತ್ತೂರಿನಲ್ಲಿ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದ್ದಾರೆ.

ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ ಸ್ಥಾಪನೆ ಮಾಡಿರುವ ಇಶಾ ಫೌಂಡೇಷನ್ ವತಿಯಿಂದ 112 ಅಡಿ ಎತ್ತರದ ‘ಆದಿಯೋಗಿ’ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ಶಿವರಾತ್ರಿಯಂದೇ ಪ್ರಧಾನಿ ಮೋದಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಭಾರತ ಹಲವು ಸಂಸ್ಕೃತಿಗಳ ತವರಾಗಿದೆ. ಕಾಶಿ, ಕೇದಾರ ಮೊದಲಾದ ಕ್ಷೇತ್ರಗಳಂತೆಯೇ ಈ ಸ್ಥಳವೂ ಖ್ಯಾತಿ ಪಡೆಯಲಿ ಎಂದು ಹೇಳಿದ್ದಾರೆ. ಯೋಗ ಪ್ರಚುರಪಡಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಾ ಯೋಗ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ವಿಶ್ವದ ಅನೇಕ ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗಿದೆ. ಯೋಗದ ಮಹತ್ವವನ್ನು ತಿಳಿಯಲಾಗುತ್ತಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...