alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಕೃತಿ ಸೌಂದರ್ಯಕ್ಕೆ ಮನಸೋತು ಛಾಯಾಗ್ರಾಹಕರಾದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಿಕ್ಕಿಂನ ಮೊದಲ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದಾರೆ. ಗ್ಯಾಂಗ್ಟೋಕ್ ನಲ್ಲಿ ಪಕ್ಯೊಂಗ್ ನ್ಯೂ  ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ.

ಇದು ದೇಶದ 100ನೇ ವಿಮಾನ ನಿಲ್ದಾಣವಾಗಿದೆ. ಸಿಕ್ಕಿಂನ ಸುಂದರ ಪ್ರದೇಶದಲ್ಲಿ ಪಕ್ಯೊಂಗ್ ವಿಮಾನ ನಿಲ್ದಾಣವಿದೆ. ಉದ್ಘಾಟನೆಗೆ ಹೋಗಿದ್ದ ನರೇಂದ್ರ ಮೋದಿ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ.

ಮೋದಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಲ್ಲದೆ ತಮ್ಮ ಮೊಬೈಲ್ ನಲ್ಲಿ ಅದ್ರ ಸೌಂದರ್ಯವನ್ನು ಸೆರೆ ಹಿಡಿದಿದ್ದಾರೆ. ಶ್ರೀಸಾಮಾನ್ಯರಂತೆ ಪ್ರಕೃತಿಯನ್ನು ಸೆರೆ ಹಿಡಿಯುತ್ತಿದ್ದ ಮೋದಿಯವರನ್ನು ನೆರೆದಿದ್ದ ಜನರು ಕುತೂಹಲದಿಂದ ನೋಡ್ತಿದ್ದರು. ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಮೋದಿ ಇನ್ಕ್ರೆಡಿಬಲ್ ಇಂಡಿಯಾ ಎಂದು ಶೀರ್ಷಿಕೆ ಹಾಕಿದ್ದಾರೆ.

ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ ಮೋದಿ, ಇಂದು ದೇಶದ ಐತಿಹಾಸಿಕ ದಿನ ಎಂದಿದ್ದಾರೆ. ಸಿಕ್ಕಿಂ ರಾಜ್ಯದ 9 ವರ್ಷಗಳ ಕನಸು ಈಗ ನನಸಾಗಿದೆ. ವಿಮಾನ ನಿಲ್ದಾಣಕ್ಕೆ 2009 ರಲ್ಲಿಯೇ ಅಡಿಪಾಯ ಹಾಕಿದ್ದರು. ಆದ್ರೆ ಕೆಲ ಮಾನವ ನಿರ್ಮಿತ ಕಾರಣ ಹಾಗೂ ನೈಸರ್ಗಿಕ ಕಾರಣದಿಂದ ಕೆಲಸ ಮುಂದುವರೆದಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...