alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗಿ ಯೋಗ ಶಿಬಿರದಲ್ಲಿ ಮೋದಿ

modi_yoga_760_1494809306_749x421

ಅಂತರಾಷ್ಟ್ರೀಯ ಯೋಗ ದಿವಸದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲಕ್ನೋದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಯೋಗ ಗುರು ಬಾಬಾ ರಾಮ್ ದೇವ್ ಜೊತೆ 50 ಸಾವಿರ ಮಂದಿ ಯೋಗ ಮಾಡಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ನಡೆಯುತ್ತಿವೆ.

ಜೂನ್ 21ರಂದು ಯೋಗ ಶಿಬಿರ ನಡೆಯಲಿದ್ದು, ಲಕ್ನೋ ಮೈದಾನದಲ್ಲಿ ಈಗಿನಿಂದಲೇ ತಯಾರಿ ನಡೆಯುತ್ತಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಮಾಬಾಯಿ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯ ಸರ್ಕಾರದ ವಕ್ತಾರರ ಪ್ರಕಾರ, ರಾಜನಾಥ್ ಸಿಂಗ್ ಯೋಗಿ ಭೇಟಿ ಮಾಡಿ ಯೋಗ ಶಿಬಿರದ ತಯಾರಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಶಿಬಿರದ ತಯಾರಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನಂತ್ರ ಮಾತನಾಡಿದ ರಾಜನಾಥ್ ಸಿಂಗ್, ಯೋಗಿಯ ಈ ಯೋಗ ಶಿಬಿರ ಯಶಸ್ವಿಯಾಗಲಿದೆ ಎಂದಿದ್ದಾರೆ. ಶಿಬಿರದ ಬಗ್ಗೆ ಮಾಹಿತಿ ನೀಡಿದ ಯೋಗಿ ಇದು ಅಧಿಕಾರಿ ಮಟ್ಟದಲ್ಲಿ ನಡೆಯುವ ಶಿಬಿರವಲ್ಲ. ಸಾರ್ವಜನಿಕರ ಯೋಗ ಕಾರ್ಯಕ್ರಮ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...