alex Certify
ಕನ್ನಡ ದುನಿಯಾ       Mobile App
       

Kannada Duniya

ತ್ರಿವಳಿ ತಲಾಕ್ ವಿಚಾರದಲ್ಲಿ ರಾಜಕೀಯ ಬೇಡ – ಪ್ರಧಾನಿ ಮೋದಿ

c-j3l8mvwaa-a_h

ರಾಷ್ಟ್ರದಾದ್ಯಂತ ಬಿಸಿಬಿಸಿ ಚರ್ಚೆಯಾಗ್ತಾ ಇರುವ ತ್ರಿವಳಿ ತಲಾಕ್ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ. ತ್ರಿವಳಿ ತಲಾಕ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮೋದಿ ಭಾರತದ ಪರಂಪರೆ ಬಗ್ಗೆ ನನಗೆ ಪೂರ್ತಿ ವಿಶ್ವಾಸವಿದೆ. ಮುಸ್ಲಿಂ ಸಮಾಜದ ಜನರು ಇದ್ರ ವಿರುದ್ಧ ಹೋರಾಟ ನಡೆಸಲು ತಾವೇ ಖುದ್ದು ಮುಂದೆ ಬರಬೇಕು ಎಂದು ಕರೆ ನೀಡಿದ್ರು. ಹಾಗೆ ತ್ರಿವಳಿ ತಲಾಕ್ ನಲ್ಲಿ ರಾಜಕೀಯ ಬೇಡ ಎಂದು ಮೋದಿ ಸಲಹೆ ನೀಡಿದ್ದಾರೆ.

ದೆಹಲಿಯ ವಿಜ್ಞಾನ ಭವನದಲ್ಲಿ ಅಂತರಾಷ್ಟ್ರೀಯ ಬಸವ ಜಯಂತಿ ಉದ್ಘಾಟನೆ ಮಾಡಿದ ಮೋದಿ, ಓಂ ಶ್ರೀ ಬಸವ ಲಿಂಗಾಯ ನಮಃ ಎನ್ನುವ ಮೂಲಕ ಭಾಷಣ ಶುರುಮಾಡಿದ್ರು. 23 ಭಾಷೆಗಳಲ್ಲಿ ಹೊರ ತಂದಿರುವ  ಶರಣರ ವಚನ ಸಂಪುಟವನ್ನು ಮೋದಿ ಇದೇ ವೇಳೆ ಬಿಡುಗಡೆ ಮಾಡಿದ್ರು, ಮಹಿಳಾ ಸಬಲೀಕರಣಕ್ಕೆ ಬಸವಣ್ಣನವರು ಒತ್ತು ನೀಡಿದ್ದರು. ಎಲ್ಲ ಜನಾಂಗದ ಮಹಿಳೆಯರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅವಕಾಶವನ್ನು ಬಸವಣ್ಣನವರು ನೀಡಿದ್ದರು ಎಂದು ಮೋದಿ ತಿಳಿಸಿದ್ರು. ಬಸವಣ್ಣನವರ ನಿಲುವು, ಕಾರ್ಯಗಳನ್ನು ಭಾಷಣದುದ್ದಕ್ಕೂ ಕೊಂಡಾಡಿದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...