alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಹಳೀಯರ ನಾಡಿನತ್ತ ಪ್ರಧಾನಿ ಮೋದಿ….

New Delhi: Prime Minister Narendra Modi before the ceremonial welcome of Nepal's President Bidhya Devi Bhandari at Rashtrapati Bhavan in New Delhi on Tuesday PTI Photo by Manvender Vashist (PTI4_18_2017_000077A)

ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಶ್ರೀಲಂಕಾ ಭೇಟಿ ಆರಂಭವಾಗ್ತಿದೆ. ದ್ವೀಪರಾಷ್ಟ್ರದ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ವೃದ್ಧಿಸುವುದು ಈ ಪ್ರವಾಸದ ಉದ್ದೇಶ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಬಾರಿಗೆ ಮೋದಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಆಹ್ವಾನದ ಹಿನ್ನೆಲೆಯಲ್ಲಿ ಮೋದಿ ಸಿಂಹಳೀಯರ ನಾಡಿಗೆ ಭೇಟಿ ನೀಡ್ತಿದ್ದಾರೆ. ಅತಿ ದೊಡ್ಡ ಬೌದ್ಧ ಉತ್ಸವ ವಿಶ್ವಸಂಸ್ಥೆಯ 14ನೇ ಅಂತರಾಷ್ಟ್ರೀಯ ವೇಸಕ್ ದಿನದ ಮುಖ್ಯ ಅತಿಥಿಯಾಗಿ ಮೋದಿ ಭಾಗವಹಿಸಲಿದ್ದಾರೆ. ಕೊಲಂಬೋದ ದೇವಾಲಯದಲ್ಲಿ ದೀಪ ಬೆಳಗುವ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ.

ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನದಲ್ಲಿ 100 ದೇಶಗಳ ಪ್ರಮುಖರು ಭಾಗವಹಿಸಲಿದ್ದಾರೆ. ಕ್ಯಾಂಡಿ ಎಂಬ ಪ್ರದೇಶದಲ್ಲಿ ತಮಿಳರ ಜೊತೆ ಮೋದಿ ಮಾತುಕತೆ ನಡೆಸಲಿದ್ದಾರೆ. ಭಾರತದ 150 ಕೋಟಿ ರೂಪಾಯಿ ನೆರವಿನಿಂದ ನಿರ್ಮಾಣವಾಗಿರುವ 150 ಹಾಸಿಗೆಗಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇಂತಹ ಹತ್ತಾರು ಕಾರ್ಯಕ್ರಮಗಳ ಜೊತೆಗೆ ಲಂಕಾದ ಹಿರಿಯ ನಾಯಕರೊಂದಿಗೂ ಮೋದಿ ಚರ್ಚಿಸಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...