alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಕುಮಾರಸ್ವಾಮಿಗೆ ಫಿಟ್ನೆಸ್ ಚಾಲೆಂಜ್ ನೀಡಿದ ಪ್ರಧಾನಿ ಮೋದಿ

ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಫಿಟ್ನೆಸ್ ಚಾಲೆಂಜ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. 67 ವರ್ಷದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿಡಿಯೋ ಮೂಲಕ ತಮ್ಮ ಫಿಟ್ನೆಸ್ ಮಂತ್ರವನ್ನು ಇಡೀ ವಿಶ್ವಕ್ಕೆ ತಿಳಿಸಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ಮೋದಿಗೆ ಚಾಲೆಂಜ್ ಮಾಡಿದ್ದರು. ಕೊಹ್ಲಿ ಚಾಲೆಂಜ್ ಸ್ವೀಕರಿಸಿದ್ದ ಮೋದಿ ಕೆಲವೇ ದಿನಗಳಲ್ಲಿ ಫಿಟ್ನೆಸ್ ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ವಿಡಿಯೋದಲ್ಲಿ ಮೋದಿ ಯೋಗ ಮಾಡ್ತಿದ್ದಾರೆ.

ಕಲ್ಲಿನ ಮೇಲೆ, ಹುಲ್ಲಿನ ಮೇಲೆ ಹಾಗೂ  ನೀರಿನಲ್ಲಿ ನಡೆಯುವ ಮೋದಿ ಮಾರ್ನಿಂಗ್ ವಾಕ್ ನ ಕೆಲವು ಭಂಗಿಗಳನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಮೋದಿ ವಾಕಿಂಗ್ ವಿಡಿಯೋ ಫಿಟ್ನೆಸ್ ಪ್ರಿಯರಿಗೆ ಇಷ್ಟವಾಗಲಿದೆ.

ಯೋಗದ ವಿಡಿಯೋ ಹಾಕಿರುವ ಮೋದಿ ಕರ್ನಾಟಕದ ನೂತನ ಸಿಎಂ ಕುಮಾರಸ್ವಾಮಿ ಹಾಗೂ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾಗೆ ಚಾಲೆಂಜ್ ಮಾಡಿದ್ದಾರೆ. ಇದ್ರ ಜೊತೆಗೆ 40 ವರ್ಷ ಮೇಲ್ಪಟ್ಟ ಐಪಿಎಸ್ ಅಧಿಕಾರಿಗಳಿಗೆ ಕೂಡ ಫಿಟ್ನೆಸ್ ಚಾಲೆಂಜ್ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...