alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಕಾಕಾರರಿಗೆ ಪ್ರಧಾನಿ ಮೋದಿ ತಿರುಗೇಟು

modi

ನೋಟು ನಿಷೇಧಕ್ಕೂ ಮುನ್ನ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ ಅಂತಾ ಟೀಕೆ ಮಾಡಿದವರಿಗೆಲ್ಲ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಕಪ್ಪುಹಣ ಹೊಂದಿರುವವರಿಗೆಲ್ಲ ನೋಟು ನಿಷೇಧದಿಂದ ಬೇಸರವಾಗಿದೆ, ಯಾಕಂದ್ರೆ ಅವರಿಗೆ ತಯಾರಿ ಮಾಡಿಕೊಳ್ಳಲು ಸಮಯ ಸಿಕ್ಕಿಲ್ಲ ಅಂತಾ ಹೇಳಿದ್ದಾರೆ. ನೋಟು ನಿಷೇಧ ಜಾರಿಗೂ ಮುನ್ನ 3 ದಿನ ಸಮಯ ಸಿಕ್ಕಿದ್ರೆ ಕಪ್ಪು ಹಣ ಹೊಂದಿರುವವರು ಕೂಡ ಸರ್ಕಾರದ ನಿರ್ಧಾರವನ್ನು ಬೆಂಬಲಿಸುತ್ತಿದ್ದರು ಅಂತಾ ಟಾಂಗ್ ಕೊಟ್ಟಿದ್ದಾರೆ.

‘ಸಂಸತ್ ನಲ್ಲಿ ಹಲವರು ನೋಟು ನಿಷೇಧವನ್ನು ವಿರೋಧಿಸ್ತಿದ್ದಾರೆ, ಅದಕ್ಕೆ ಬಹುತೇಕರು ಕೊಡುತ್ತಿರುವ ಕಾರಣ ಸರ್ಕಾರ ಸೂಕ್ತ ತಯಾರಿ ಮಾಡಿಕೊಂಡಿಲ್ಲ ಅನ್ನೋದು. ಆದ್ರೆ ಆ ಟೀಕೆಯ ಹಿಂದಿರುವ ನಿಜವಾದ ಕಾರಣವೇ ಬೇರೆ. ಸರ್ಕಾರ ಅವರಿಗೆ ತಯಾರಿ ಮಾಡಿಕೊಳ್ಳಲು ಸಮಯ ಕೊಟ್ಟಿಲ್ಲ ಎಂಬ ಕಾರಣಕ್ಕೆ ಟೀಕಿಸುತ್ತಿದ್ದಾರೆ’ ಅಂತಾ ಮಾತಿನ ಚಾಟಿ ಬೀಸಿದ್ರು.

ದೇಶದ ಗೌರವವನ್ನು ಎತ್ತಿಹಿಡಿಯಲು ಇಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ, ಭಾರತದ ಭವ್ಯ ಭವಿಷ್ಯವನ್ನು ಎದುರು ನೋಡುವವರೆಲ್ಲ ನೋಟು ನಿಷೇಧವನ್ನು ಬೆಂಬಲಿಸಿದ್ದಾರೆ ಎಂದ್ರು. ಕಳೆದ 7 ದಿನಗಳಿಂದ ನೋಟು ನಿಷೇಧ ವಿರೋಧಿಸಿ ಸಂಸತ್ ನಲ್ಲಿ ವಿಪಕ್ಷಗಳು ಗದ್ದಲ ಎಬ್ಬಿಸುತ್ತಿವೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ಕೂಡ ನಡೆದಿದೆ, ಈ ಹಿನ್ನೆಲೆಯಲ್ಲಿ ಮೋದಿ ವಿಪಕ್ಷಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...