alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾರ ಅಂತಿಮ ದರ್ಶನ ಪಡೆದ ಪ್ರಧಾನಿ

pm-narendra-modi-reaches-rajaji-hall-in-chennai-pays-last-respects-to-jayalalithaaಸೋಮವಾರ ರಾತ್ರಿ 11-30 ಕ್ಕೆ ನಿಧನರಾದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಚೆನ್ನೈನ ರಾಜಾಜಿ ಹಾಲ್ ನಲ್ಲಿಡಲಾಗಿದ್ದು, ವಿಶೇಷ ವಿಮಾನದಲ್ಲಿ ನವದೆಹಲಿಯಿಂದ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಜಯಲಲಿತಾರವರ ಅಂತಿಮ ದರ್ಶನ ಪಡೆದಿದ್ದಾರೆ.

ವಿಮಾನ ನಿಲ್ದಾಣದಿಂದ ನೇರವಾಗಿ ರಾಜಾಜಿ ಹಾಲ್ ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿಯವರು ಪುಷ್ಪಗುಚ್ಚ ಅರ್ಪಿಸಿ ಜಯಲಲಿತಾರಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸೇರಿದಂತೆ ಎಐಎಡಿಎಂಕೆ ನಾಯಕರಿಗೆ ಸಾಂತ್ವನ ಹೇಳಿದರು.

ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರೂ ಚೆನ್ನೈಗೆ ಆಗಮಿಸುತ್ತಿದ್ದು, ಜಯಲಲಿತಾರ ಅಂತಿಮ ದರ್ಶನ ಪಡೆಯಲಿದ್ದಾರೆಂದು ಹೇಳಲಾಗಿದೆ. ರಾಷ್ಟ್ರಪತಿಯವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ತಲೆದೋರಿದ್ದ ಕಾರಣ ವಿಮಾನ ಮತ್ತೇ ದೆಹಲಿಗೆ ವಾಪಾಸ್ ತೆರಳಿದ್ದು, ಈಗ ಮತ್ತೊಂದು ವಿಮಾನದಲ್ಲಿ ರಾಷ್ಟ್ರಪತಿಯವರು ಆಗಮಿಸುತ್ತಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...