alex Certify
ಕನ್ನಡ ದುನಿಯಾ       Mobile App
       

Kannada Duniya

“18 ಅಲ್ಲ 12 ತಿಂಗಳಲ್ಲಿಯೇ ಫಲಾನುಭವಿಗಳಿಗೆ ಸಿಗಲಿದೆ ಮನೆ’’

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಲ ದಿನಗಳಿಂದ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ನಮೋ ಆ್ಯಪ್ ಹಾಗೂ ನೇರವಾಗಿ ಫಲಾನುಭವಿಗಳ ಅನುಭವವನ್ನು ಕೇಳುತ್ತಿದ್ದಾರೆ. ಮಂಗಳವಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ.

ನಿಮ್ಮ ಕನಸೇ ನನ್ನ ಕನಸು ಎಂದಿರುವ ಮೋದಿ 2022 ರೊಳಗೆ ಎಲ್ಲ ಫಲಾನುಭವಿಗಳಿಗೆ ಮನೆ ನೀಡುವುದು ನಮ್ಮ ಗುರಿ ಎಂದಿದ್ದಾರೆ. ಹಳ್ಳಿಯಲ್ಲಿ ಮೂರು ಕೋಟಿ ಹಾಗೂ ನಗರದಲ್ಲಿ ಒಂದು ಕೋಟಿ ಹೊಸ ಮನೆ ನಿರ್ಮಾಣ ಮಾಡುವುದು ಕೇಂದ್ರ ಸರ್ಕಾರದ ಗುರಿಯಂತೆ.

ಸ್ವಂತ ಮನೆ ಹೊಂದಿದ ವ್ಯಕ್ತಿ ಖುಷಿಯಾಗಿರುತ್ತಾನೆ. ಹೊಸ ತಂತ್ರಜ್ಞಾನದ ಮೂಲಕ ಸುರಕ್ಷಿತ ಹಾಗೂ ಉತ್ತಮ ಮನೆಯನ್ನು ನಾವು ಶೀಘ್ರವಾಗಿ ನಿರ್ಮಾಣ ಮಾಡುತ್ತಿದ್ದೇವೆಂದು ಮೋದಿ ಹೇಳಿದ್ದಾರೆ. ಈ ಹಿಂದೆ ಮನೆ ನಿರ್ಮಾಣಕ್ಕೆ 18 ತಿಂಗಳವರೆಗೆ ಸಮಯ ಬೇಕಿತ್ತು. ಆದ್ರೀಗ ಮನೆ ನಿರ್ಮಾಣ ವೇಗ ಪಡೆದಿದೆ. 12 ತಿಂಗಳೊಳಗೆ ಮನೆ ನಿರ್ಮಾಣವಾಗ್ತಿದೆ. ಮಧ್ಯವರ್ತಿಗಳನ್ನು ತೆಗೆದುಹಾಕಿ ನೇರವಾಗಿ ಫಲಾನುಭವಿಗಳಿಗೆ ಮನೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಮೋದಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...