alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ನಲ್ಲಿ ಸಿಗ್ತಿದೆ ಮಾರುಕಟ್ಟೆ: ಕ್ಷಣದಲ್ಲಿ ಮಾಡಿ ಬಿಲ್ ಪಾವತಿ ಎಂದ್ರು ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಡಿಜಿಟಲ್ ಇಂಡಿಯಾ ಫಲಾನುಭವಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಈಗ ದೇಶ ಹಾಗೂ ವಿದೇಶಿ ಮಾರುಕಟ್ಟೆ ಮೊಬೈಲ್ ಗೆ ಬಂದಿದೆ. ಜನರು ಕರೆಂಟ್, ನೀರು, ಗ್ಯಾಸ್ ಸೇರಿದಂತೆ ಎಲ್ಲ ಬಿಲ್ ಗಳನ್ನು ಮೊಬೈಲ್ ಮೂಲಕ ಕ್ಷಣ ಮಾತ್ರದಲ್ಲಿ ಪಾವತಿ ಮಾಡ್ತಾರೆ. ನಾಲ್ಕು ವರ್ಷದಲ್ಲಿ ಡಿಜಿಟಲ್ ಭಾರತ ನಿರ್ಮಾಣಕ್ಕೆ ಸಂಪೂರ್ಣ ಗಮನ ನೀಡಿದ್ದೇನೆ ಎಂದಿದ್ದಾರೆ.

ನಮೋ ಆ್ಯಪ್ ಮೂಲಕ ಫಲಾನುಭವಿಗಳ ಜೊತೆ ಮಾತನಾಡಿದ ಮೋದಿ, ಡಿಜಿಟಲ್ ಇಂಡಿಯಾ ಒಂದು ಮಹತ್ವದ ನಿರ್ಣಯವೆಂದ್ರು. ಡಿಜಿಟಲ್ ಇಂಡಿಯಾ ಗ್ರಾಮೀಣ ಜನರು, ನಗರದ ಜನರು, ರೈತರು, ಯುವಕರು ಸೇರಿದಂತೆ ಇಡೀ ಭಾರತದ ಜನರನ್ನು ಡಿಜಿಟಲ್ ಜಗತ್ತಿನಲ್ಲಿ ಸೇರಿಸುವ ಒಂದು ಮಹತ್ವದ ನಿರ್ಣಯವೆಂದಿದ್ದಾರೆ.

ಈಗಿನ ಕಾಲೇಜು ವಿದ್ಯಾರ್ಥಿಗಳು ಪುಸ್ತಕದ ಜೊತೆ ಡಿಜಿಟಲ್ ಮಾಧ್ಯಮದ ಮೂಲಕ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಸರ್ಕಾರಿ ಸೇವೆಗಳು ಕೂಡ ಆ್ಯಪ್ ನಲ್ಲಿ ಸೇರ್ಪಡೆಗೊಂಡಿವೆ. 1600 ಸಂಸ್ಥೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ನಾಲ್ಕು ವರ್ಷದಲ್ಲಿ ಸುಮಾರು ಮೂರು ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು ತೆರೆಯಲ್ಪಟ್ಟಿವೆ ಎಂದು ಮೋದಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...