alex Certify
ಕನ್ನಡ ದುನಿಯಾ       Mobile App
       

Kannada Duniya

ನಾಲ್ಕು ವರ್ಷಗಳಲ್ಲಿ ಮೋದಿ ಸಂಪತ್ತು ಇಷ್ಟು ಹೆಚ್ಚಾಯ್ತು

ಪ್ರಧಾನ ಮಂತ್ರಿ ಕಚೇರಿ ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಥಿರಾಸ್ತಿಯ ವಿವರವನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಮಾರು 2.28 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಬಳಿ 1.5 ಕೋಟಿ ರೂಪಾಯಿ ಆಸ್ತಿಯಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಆಸ್ತಿಯಲ್ಲಿ 75 ಲಕ್ಷ ರೂಪಾಯಿ ಹೆಚ್ಚಳವಾಗಿದೆ.

2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಬಳಿಯಿರುವ ಆಸ್ತಿ ವಿವರವನ್ನು ನೀಡಿದ್ದರು. ಇದ್ರ ಆಧಾರದ ಮೇಲೆ 2014-2018 ರ ಮಧ್ಯೆ ಎಷ್ಟು ಆಸ್ತಿ ಹೆಚ್ಚಾಗಿದೆ ಎಂಬುದರ ವಿವರ ಇಲ್ಲಿದೆ.

2014ರ ಲೋಕಸಭಾ ಚುನಾವಣೆ ವೇಳೆ ಮೋದಿ ಬಳಿ 1 ಕೋಟಿ 51 ಲಕ್ಷದ 57 ಸಾವಿರದ 582 ರೂಪಾಯಿ ಆಸ್ತಿಯಿತ್ತು. 2018ರಲ್ಲಿ 2.28 ಕೋಟಿ ಆಸ್ತಿಯಿದೆ.

2014ರಲ್ಲಿ ಮೋದಿ ಬಳಿ 29 ಸಾವಿರ ರೂಪಾಯಿ ನಗದಿತ್ತು. 2018ರಲ್ಲಿ ಮೋದಿ ಬಳಿ 48 ಸಾವಿರ 944 ರೂಪಾಯಿ ನಗದಿದೆ.

2014ರಲ್ಲಿ ಪೋಸ್ಟಲ್ ಸೇವಿಂಗ್ ನಲ್ಲಿ 4,34,031 ರೂಪಾಯಿಯಿತ್ತು. 2018ರಲ್ಲಿ ಎಸ್ಬಿಐ ಬ್ಯಾಂಕ್ ನಲ್ಲಿ 11,29,690 ರೂಪಾಯಿಯಿದೆ.

2014 ರಲ್ಲಿ ಇನ್ಫ್ರಾಸ್ಟ್ರಕ್ಚರ್ ಬಾಂಡ್ ಠೇವಣಿ 20 ಸಾವಿರ ರೂಪಾಯಿ. 2018 ರಲ್ಲಿ ಕೂಡ ಯಾವುದೇ ಬದಲಾವಣೆಯಾಗಿಲ್ಲ.

2014 ರಲ್ಲಿ 1 ಲಕ್ಷ 35 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಆಭರಣವಿತ್ತು. 2018 ರಲ್ಲಿ 1 ಲಕ್ಷ 38 ಸಾವಿರ ರೂಪಾಯಿ ಮೌಲ್ಯದ ಚಿನ್ನವಿದೆ.

ಪ್ರಧಾನ ಮಂತ್ರಿ ಬಳಿ ಯಾವುದೇ ದ್ವಿಚಕ್ರ ವಾಹನವಾಗ್ಲಿ, ನಾಲ್ಕು ಚಕ್ರದ ವಾಹನವಾಗ್ಲಿ ಇಲ್ಲ. ಪ್ರಧಾನ ಮಂತ್ರಿ ಹುದ್ದೆಗೇರಿದ ಮೇಲೆ ಮೋದಿ ಯಾವುದೇ ಬಂಗಾರ ಖರೀದಿ ಮಾಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...