alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ದಾರ್ ಸರೋವರ್ ಆಣೆಕಟ್ಟು ಲೋಕಾರ್ಪಣೆ

ಹುಟ್ಟುಹಬ್ಬದ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶಕ್ಕೆ ಉಡುಗೊರೆ ನೀಡಿದ್ದಾರೆ. ಸರ್ದಾರ್ ಸರೋವರ್  ಆಣೆಕಟ್ಟನ್ನು ರಾಷ್ಟ್ರಕ್ಕೆ ಅರ್ಪಿಸಿದ್ದಾರೆ. ಮೊದಲು ನರ್ಮದಾ ನದಿಗೆ ಪೂಜೆ ಮಾಡಿ ಬಾಗಿನ ಅರ್ಪಿಸಿದ ಮೋದಿ ನಂತ್ರ ಆಣೆಕಟ್ಟನ್ನು ಉದ್ಘಾಟಿಸಿದ್ರು. ಈ ಸಂದರ್ಭದಲ್ಲಿ ಗುಜರಾತ್ ಸಿಎಂ ವಿಜಯ್ ರೂಪಾನಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.

ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಆಣೆಕಟ್ಟು ವಿಶ್ವದ ಎರಡನೇ ಅತಿದೊಡ್ಡ ಆಣೆಕಟ್ಟಾಗಿದೆ. ಈ ಆಣೆಕಟ್ಟಿನ ಯೋಜನೆಯನ್ನು ಸರ್ದಾರ್ ವಲ್ಲಭಭಾಯ್ ಪಟೇಲ್ ಮೊದಲು ರೂಪಿಸಿದ್ದರು. ಸರ್ದಾರ್ ಸರೋವರ್ ಡ್ಯಾಂಗೆ 1961ರಲ್ಲಿ ಜವಾಹರ್ ಲಾಲ್ ನೆಹರು ಅಡಿಗಲ್ಲು ಹಾಕಿದ್ದರು. ಅಂದು ಆರಂಭವಾಗಿದ್ದ ನಿರ್ಮಾಣ ಕಾರ್ಯ ಈ ವರ್ಷ ಮುಕ್ತಾಯಗೊಂಡಿದೆ.

ನರ್ಮದಾ ಜಿಲ್ಲೆಯ ಕೆವಾದಿಯಾ ಪ್ರಾಂತ್ಯದಲ್ಲಿ ಆಣೆಕಟ್ಟು ನಿರ್ಮಿಸಲಾಗಿದೆ. 163 ಮೀಟರ್ ಆಳದಲ್ಲಿ ಈ ಆಣೆಕಟ್ಟಿದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗೆ ಸರಬರಾಜಾಗಲಿದೆ. ಗುಜರಾತಿನ ಸುಮಾರು 18 ಲಕ್ಷ ಹೆಕ್ಟೇರ್ ಭೂಮಿಗೆ ಈ ಆಣೆಕಟ್ಟಿನಿಂದ ನೀರು ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...