alex Certify
ಕನ್ನಡ ದುನಿಯಾ       Mobile App
       

Kannada Duniya

ನಾಲ್ಕು ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಪ್ರವಾಸ ಆರಂಭ

modi1-k8ng-621x414livemint

ಪ್ರಧಾನಿ ನರೇಂದ್ರ ಮೋದಿ ಇವತ್ತಿನಿಂದ ನಾಲ್ಕು ರಾಷ್ಟ್ರಗಳ ಪ್ರವಾಸ ಆರಂಭಿಸ್ತಿದ್ದಾರೆ. ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಹಾಗೂ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಜರ್ಮನಿ, ಸ್ಪೇನ್, ರಷ್ಯಾ ಮತ್ತು ಫ್ರಾನ್ಸ್ ಗೆ ಮೋದಿ ಪ್ರಯಾಣ ಬೆಳೆಸ್ತಿದ್ದಾರೆ.

ಭಾರತದ ಆರ್ಥಿಕ ಅಭಿವೃದ್ಧಿಗಾಗಿ 6 ದಿನಗಳ ಪ್ರವಾಸ ಹಮ್ಮಿಕೊಂಡಿರುವುದಾಗಿ ಮೋದಿ ತಿಳಿಸಿದ್ದಾರೆ. ಮೊದಲು ಜರ್ಮನಿಗೆ ತೆರಳಲಿರುವ ಪ್ರಧಾನಿ, ಅಲ್ಲಿನ ಚಾನ್ಸೆಲರ್ ಏಂಜೆಲಾ ಮೊರ್ಕೆಲ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಉಭಯ ರಾಷ್ಟ್ರಗಳ ಪ್ರಮುಖ ಉದ್ಯಮಿಗಳನ್ನು ಕೂಡ ನಮೋ ಭೇಟಿಯಾಗಲಿದ್ದಾರೆ.

ವ್ಯಾಪಾರ, ಹೂಡಿಕೆ, ಭದ್ರತೆ, ಉಗ್ರ ನಿಗ್ರಹ, ಟೆಕ್ನಾಲಜಿ, ಕೌಶಲ್ಯಾಭಿವೃದ್ಧಿ, ಮೂಲಸೌಕರ್ಯ, ರೈಲ್ವೆ, ನಾಗರಿಕ ವಿಮಾನಯಾನ ಸೇರಿದಂತೆ ಹಲವು ಕ್ಷೇತ್ರಗಳ ಕುರಿತಂತೆ ಭಾರತ ಹಾಗೂ ಜರ್ಮನಿ ಮಧ್ಯೆ ಚರ್ಚೆ ನಡೆಯಲಿದೆ. ಜರ್ಮನಿ, ಯುರೋಪ್ ನಲ್ಲಿ ಭಾರತದ ಅತಿದೊಡ್ಡ ವ್ಯಾಪಾರಿ ಪಾಲುದಾರ ಎನಿಸಿಕೊಂಡಿದೆ.

ಮಂಗಳವಾರ ಮೋದಿ ಸ್ಪೇನ್ ಗೆ ತೆರಳಲಿದ್ದು, ಮೂರು ದಶಕಗಳ ನಂತರ ಆ ರಾಷ್ಟ್ರಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ನಂತರ 3 ದಿನಗಳ ಕಾಲ ರಷ್ಯಾದಲ್ಲಿ ತಂಗಲಿದ್ದಾರೆ. ಜೂನ್ 2ರಂದು ರಷ್ಯಾ ಪ್ರಧಾನಿ ವ್ಲಾಡಿಮಿರ್ ಪುಟಿನ್ ಹಾಗೂ ಮೋದಿ, ಸೇಂಟ್ ಪೀಟರ್ಸ್ ಬರ್ಗ್ ಇಂಟರ್ ನ್ಯಾಶನಲ್ ಎಕನಾಮಿಕ್ ಫೋರಂ ಉದ್ದೇಶಿಸಿ ಮಾತನಾಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...