alex Certify
ಕನ್ನಡ ದುನಿಯಾ       Mobile App
       

Kannada Duniya

ಆ.15 ರ ಮೋದಿ ಭಾಷಣದಲ್ಲಿ ಏನಿರಬೇಕು? ಸಲಹೆ ನೀಡಲು ನಿಮಗೂ ಇದೆ ಅವಕಾಶ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 15, ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ನರೇಂದ್ರ ಮೋದಿಯವರ ಐದನೇ ಭಾಷಣವಾಗಿರಲಿದೆ. ಈ ಬಾರಿ ಭಾಷಣದಲ್ಲಿ ಯಾವ ವಿಷ್ಯದ ಬಗ್ಗೆ ಮಾತನಾಡಬೇಕೆಂದು ಮೋದಿ ದೇಶದ ಜನತೆಯನ್ನು ಕೇಳಿದ್ದಾರೆ.

ಮಂಗಳವಾರ ಬೆಳಿಗ್ಗೆ ನರೇಂದ್ರ ಮೋದಿ ಈ ಸಂಬಂಧ ಟ್ವಿಟ್ ಮಾಡಿದ್ದಾರೆ. ಆಗಸ್ಟ್ 15ರ ಭಾಷಣದ ಬಗ್ಗೆ ನಿಮ್ಮ ಆಲೋಚನೆ ಹಾಗೂ ವಿಚಾರವೇನು? ಈ ಬಗ್ಗೆ ನರೇಂದ್ರ ಮೋದಿ ಆ್ಯಪ್ ನಲ್ಲಿ ಸಲಹೆ ನೀಡಿ ಎಂದು ಮೋದಿ ಟ್ವಿಟ್ ಮಾಡಿದ್ದಾರೆ. https://www.mygov.in/group-issue/give-suggestions-prime-ministers-speech-independence-day-2018/ ನಲ್ಲಿ ಕೂಡ ನೀವು ನಿಮ್ಮ ಅಭಿಪ್ರಾಯವನ್ನು ಹೇಳಬಹುದಾಗಿದೆ. ನಿಮ್ಮ ಸಲಹೆಗಾಗಿ ನಾನು ಕಾಯುತ್ತಿದ್ದೇನೆಂದು ಮೋದಿ ಹೇಳಿದ್ದಾರೆ.

ನರೇಂದ್ರ ಮೋದಿಗೆ ಸಲಹೆ ನೀಡುವ ಅಥವಾ ತಮ್ಮ ವಿಚಾರವನ್ನು ಅವ್ರ ಮುಂದಿಡಬಯಸುವವರು mygov.in ಗೆ ಭೇಟಿ ನೀಡಬೇಕು. ಅಲ್ಲಿರುವ ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಆಲೋಚನೆಗಳನ್ನು ಹೇಳಬಹುದಾಗಿದೆ. ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ಮೋದಿ ಮಾಡುವ ಭಾಷಣದ ಮೇಲೆ ಎಲ್ಲರ ಕಣ್ಣಿದೆ. ಪ್ರಸ್ತುತ ಸರ್ಕಾರದ ಕೊನೆ ಭಾಷಣವಾಗಿದ್ದು, ಮೋದಿ 2019 ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ಘೋಷಣೆ ಮಾಡುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...