alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಧರಿಸಿದ್ದ ಸೂಟ್ ಗಿನ್ನಿಸ್ ದಾಖಲೆಗೆ ಸೇರ್ಪಡೆ

PM Modi's Suit Most Expensive Sold At Auction, Rules Guinness Recordsನವದೆಹಲಿ: ನರೇಂದ್ರ ಮೋದಿಯವರ ಹೆಸರಿನ ಮೊನೊಗ್ರಾಮ್ ಇದ್ದ ಸೂಟ್ ಅನ್ನು ಶನಿವಾರ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗೆ ಸೇರಿಸಲಾಗಿದೆ. ಹರಾಜಿನಲ್ಲಿ ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಸೂಟ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಈ ಸೂಟ್ ಅನ್ನು ನರೇಂದ್ರ ಮೋದಿಯವರು 2015 ರಲ್ಲಿ ಬರಾಕ್ ಒಬಾಮಾ ಅವರ ಭಾರತ ಭೇಟಿಯ ವೇಳೆ ಧರಿಸಿದ್ದರು. ನಂತರದಲ್ಲಿ ಇದನ್ನು ಸೂರತ್ ನ ಲಾಲಜೀಭಾಯೀ ತುಲಸೀಬಾಯಿ ಪಟೇಲ್ ಅವರು ಹರಾಜಿನಲ್ಲಿ 4.31 ಕೋಟಿ ರೂ. ಗೆ ಖರೀದಿಸಿದ್ದರು. ಬರಾಕ್ ಒಬಾಮಾ ಭೇಟಿಯ ನಂತರ ಮೋದಿಯವರು ಇದನ್ನು ಚಾರಿಟಿಗಾಗಿ ನೀಡಿದ್ದರು.

2015 ರ ಫೆಬ್ರವರಿ 20 ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಸೂಟ್ ಅನ್ನು ಖರೀದಿಸುವುದಕ್ಕಾಗಿ 47 ಜನ ಮುಂದೆ ಬಂದಿದ್ದರು. ಕೊನೆಯಲ್ಲಿ ಸೂರತ್ ನ ಲಾಲಜೀಭಾಯಿ ಅವರು 4,32,31,311 ರೂಪಾಯಿಗಳಿಗೆ ಇದನ್ನು ಖರೀದಿಸಿದ್ದರು. ಈ ಸೂಟಿನ ಮೂಲ ಬೆಲೆ 11 ಲಕ್ಷ ರೂ. ಗಳಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...