alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಪನಿಗಳಿಗೆ ಮಹತ್ವದ ಸೂಚನೆ ನೀಡಿದ ಪ್ರಧಾನ ಮಂತ್ರಿ ಸಲಹಾ ಸಮಿತಿ

ದೇಶದ ಜಿಡಿಪಿಗೆ ಆರ್ ಅ್ಯಂಡ್ ಡಿ ಕ್ಷೇತ್ರದಿಂದ ನಿರೀಕ್ಷಿತ ಮಟ್ಟದಲ್ಲಿ ಆರ್ಥಿಕ‌ ಕೊಡುಗೆ ಸಿಗುತ್ತಿಲ್ಲ ಎನ್ನುವುದು ಗಮನಿಸಿರುವ ಪ್ರಧಾನ ಮಂತ್ರಿ ಸಲಹಾ ಸಮಿತಿ ನೂತನ ಸಲಹೆಯೊಂದನ್ನು ನೀಡಿದೆ.

ವಿಜ್ಞಾನ ತಂತ್ರಜ್ಞಾನ ಹಾಗೂ ಅನ್ವೇಷಣಾ ಸಲಹಾ ಸಮಿತಿ ನೀಡಿರುವ ಈ‌ ಸಲಹೆಯಲ್ಲಿ ಪ್ರಮುಖವಾಗಿ, ದೇಶದಲ್ಲಿ ಸಂಶೋಧನಾ ಹಾಗೂ ಅಭಿವೃದ್ಧಿ ಘಟಕಗಳನ್ನು ಕಡ್ಡಾಯವಾಗಿ ಆರಂಭಿಸಬೇಕು ಎಂದಿದೆ. ಇದಕ್ಕೆ ಅಗತ್ಯ ಸಹಕಾರವನ್ನು ಸಂಬಂಧಿಸಿದ ಇಲಾಖೆಗಳು ನೀಡಬೇಕು ಎಂದಿದೆ.

ದೇಶದಲ್ಲಿ ಸುಮಾರು ಎರಡು ದಶಕಗಳಿಂದ ಆರ್ ಆ್ಯಂಡ್ ಡಿ ಕ್ಷೇತ್ರದಿಂದ ದೇಶದ ಜಿಡಿಪಿಗೆ ಕೇವಲ ಶೇ.0.6-0.7 ರಷ್ಟು ಕೊಡುಗೆಯನ್ನು ಮಾತ್ರ ನೀಡುತ್ತಿದೆ. ಆದ್ದರಿಂದ ಖಾಸಗಿ ಸಂಸ್ಥೆಗಳು ದೇಶದಲ್ಲಿ ಆರ್ ಅ್ಯಂಡ್ ಡಿ ಘಟಕ ಸ್ಥಾಪಿಸುವ ಮೂಲಕ‌ ಜಿಡಿಪಿ ಹೆಚ್ಚಿಸಲು ಸಹಾಯ ಮಾಡಬೇಕಿದೆ.

ಈ ಹಿನ್ನಲೆಯಲ್ಲಿ ಈ‌ ಘಟಕ‌ ಸ್ಥಾಪಿಸಲು‌ ಅಗತ್ಯ ಸಹಕಾರ ನೀಡುವ ಮೂಲಕ, 2022ರ ವೇಳೆ ಒಟ್ಟಾರೆ ಜಿಡಿಪಿಗೆ ಶೇ.1ರಷ್ಟು ಕೊಡುಗೆ ನೀಡಬೇಕೆಂದು ಅಭಿಪ್ರಾಯಪಟ್ಟಿದ್ದು, ಮುಂದಿನ ಐದು ವರ್ಷದಲ್ಲಿ ವಿಶ್ವ ಮಟ್ಟದ ಜಿಡಿಪಿ ಅಭಿವೃದ್ಧಿಯಷ್ಟು ಬೆಳವಣಿಗೆ ಕಾಣಬೇಕಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...