alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಯುಷ್ಮಾನ್ ಭಾರತ್’ ಈ ಐದು ರಾಜ್ಯಗಳಿಗೆ ಬೇಡವಂತೆ, ಏಕೆ ಗೊತ್ತಾ…?

ಹತ್ತು ಕೋಟಿ ಬಡವರಿಗೆ ಆರೋಗ್ಯ ಒದಗಿಸುವ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಾರ್ಖಂಡ್‌ನಲ್ಲಿ ಚಾಲನೆ ನೀಡಿದ್ದಾರೆ. ಈ ಯೋಜನೆಯ ಸಂಪೂರ್ಣ ಲಾಭವನ್ನು ಭಾರತವಾಸಿಗಳು ಪಡೆಯಲಿದ್ದಾರೆ. ಆದ್ರೆ, ಐದು ರಾಜ್ಯಗಳು ಮಾತ್ರ ಆಯುಷ್ಮಾನ್ ಭಾರತ ಯೋಜನೆಯನ್ನು ತಿರಸ್ಕರಿಸಿವೆ.

ಕೇರಳ, ಓಡಿಶಾ, ತೆಲಂಗಾಣ, ದೆಹಲಿ ಹಾಗೂ ಪಂಜಾಬ್ ರಾಜ್ಯಗಳು ಆಯುಷ್ಮಾನ್ ಭಾರತ ಯೋಜನೆ ವಿರುದ್ಧ ಅಪಸ್ಪರ ಎತ್ತಿವೆ. ಹಾಗಿದ್ರೆ ಈ ರಾಜ್ಯಗಳು ಈ ಯೋಜನೆಯಿಂದ ಹಿಂದೆ ಸರಿಯಲು ಕಾರಣ ಏನು ಗೊತ್ತಾ…?

ಓಡಿಶಾ ಸರ್ಕಾರ ರಾಜ್ಯದಲ್ಲಿ ಬಿಜು ಸ್ವಾಸ್ಥ್ಯ ಯೋಜನೆಯ ಹೆಸರಲ್ಲಿ ಆರೋಗ್ಯ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯ ಲಾಭವನ್ನು ಆಯುಷ್ಮಾನ್ ಭಾರತದ ಫಲಾನುಭವಿಗಳಿಗಿಂತ ಹೆಚ್ಚಿನ ಜನರು ಪಡೆದಿದ್ದಾರೆ. ಅಲ್ಲದೆ ಓಡಿಶಾ ಸರ್ಕಾರ ತನ್ನ ಯೋಜನೆಯಡಿ 7 ಲಕ್ಷ ರೂಪಾಯಿಗಳ ನೆರವನ್ನು ರೋಗಿಗಳಿಗೆ ನೀಡಲಿದೆ. ಮೋದಿ ತೈಲ ಬೆಲೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಎಂದು ಓಡಿಶಾ ಸಿಎಂ ನವೀನ್ ಪಟ್ನಾಯಕ್ ಟಾಂಗ್ ನೀಡಿದ್ದಾರೆ.

ಇನ್ನು ತೆಲಂಗಾಣ ಸಹ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯನ್ನು ತಿರಸ್ಕರಿಸಿದೆ. ಸ್ಥಳೀಯ ಸರ್ಕಾರ ಆರೋಗ್ಯ ಶ್ರೀ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ 70 ಪ್ರತಿಶತ ಸಾವರ್ಜನಿಕರು ಇದರ ಲಾಭ ಪಡೆದಿದ್ದಾಗಿ ತಿಳಿದು ಬಂದಿದೆ.

ಕೇರಳ ಸರ್ಕಾರ ಸಹ ಆರೋಗ್ಯ ಯೋಜನೆಗೆ ತಕರಾರು ಎತ್ತಿದೆ. ಅಲ್ಲದೆ ಈ ಯೋಜನೆಯ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದೆ. ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಯಾವುದೇ ಆರೋಗ್ಯ ಯೋಜನೆಗಳಿಲ್ಲ. ಆದ್ರೆ, ಆಯುಷ್ಮಾನ್ ಭಾರತದ ಲಾಭ ರಾಜ್ಯದಲ್ಲಿ ಕಡಿಮೆ ಫಲಾನುಭವಿಗಳಿಗೆ ಸಿಗುತ್ತಿದ್ದು, ಇನ್ನಷ್ಟು ವಿಸ್ತರಿಸುವಂತೆ ಒತ್ತಡ ಹೇರುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...