alex Certify
ಕನ್ನಡ ದುನಿಯಾ       Mobile App
       

Kannada Duniya

ಮಗ ದೇಶದ ಪ್ರಧಾನಿಯಾದ್ರೂ ಈ ಕುಟುಂಬದವರ ಬದುಕು ಹೇಗಿದೆ ಗೊತ್ತಾ?

ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಈಗ ದೇಶದ ಪ್ರಧಾನಿ. ಹಾಗಂತ ಮೋದಿ ಕುಟುಂಬದವರು ಐಷಾರಾಮಿ ಬದುಕು ನಡೆಸ್ತಿದ್ದಾರೆ ಅಂದುಕೊಂಡ್ರೆ ನಿಮ್ಮ ಲೆಕ್ಕಾಚಾರ ತಪ್ಪು.

 

ನರೇಂದ್ರ ಮೋದಿ ಅವರ ತಂದೆಗೆ ಐವರು ಸಹೋದರರು. ನರಸಿಂಹ ದಾಸ್, ನರೋತ್ತಮ ದಾಸ್, ಜಗಜೀವನ್ ದಾಸ್, ಕಾಂತಿ ಲಾಲ್ ಹಾಗೂ ಜಯಂತಿ ಲಾಲ್. ಅವರ ಪೈಕಿ ಕಾಂತಿಲಾಲ್ ಹಾಗೂ ಜಯಂತಿಲಾಲ್ ನಿವೃತ್ತ ಶಿಕ್ಷಕರು. ಜಯಂತಿ ಲಾಲ್ ರ ಅಳಿಯ ವಿದ್ಯಾನಗರದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಭರತ್ ಭಾಯಿ ಮೋದಿ ಲಾಲ್ವಾಡ ಗ್ರಾಮದಲ್ಲಿ ಪೆಟ್ರೋಲ್ ಬಂಕ್ ಒಂದರಲ್ಲಿ ಅಟೆಂಡರ್ ಆಗಿ ಕೆಲಸ ಮಾಡ್ತಿದ್ದಾರೆ. ತಿಂಗಳಿಗೆ ಅವರ ಗಳಿಕೆ 6000 ರೂಪಾಯಿ. ಅವರ ಪತ್ನಿ ರಮೀಲಾಬೆನ್ ಪುಟ್ಟದೊಂದು ಕಿರಾಣಿ ಅಂಗಡಿ ನಡೆಸ್ತಾರೆ. ತಿಂಗಳಿಗೆ 3000 ರೂಪಾಯಿ ಸಂಪಾದನೆ ಮಾಡ್ತಾರೆ.

ಭರತ್ ಭಾಯಿ ಮೋದಿ ವಾರದಲ್ಲಿ ಒಂದು ಬಾರಿ ಮಾತ್ರ ಮನೆಗೆ ಬಂದು ಹೋಗ್ತಾರೆ. ಇನ್ನಿಬ್ಬರು ಸಹೋದರರು ಕೂಡ ಇದೇ ರೀತಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಸರಳ ಬದುಕು ನಡೆಸ್ತಿದ್ದಾರೆ. ಈ ಪೈಕಿ ಅರವಿಂದ್ ಭಾಯಿ, ಅಕ್ಕಪಕ್ಕದ ಹಳ್ಳಿಗಳಲ್ಲಿ ಹಳೆ ಎಣ್ಣೆ ಕ್ಯಾನ್ ಗಳನ್ನು ಸಂಗ್ರಹಿಸಿ ಮಾರಾಟ ಮಾಡ್ತಾರೆ.

ಇನ್ನು ಅಶೋಕ್ ಭಾಯಿ, ಗಾಳಿಪಟ, ಪಟಾಕಿ, ಹಾಗೂ ಸ್ನಾಕ್ಸ್ ಮಾರಾಟ ಮಾಡ್ತಾರೆ. ಪುಟ್ಟದೊಂದು ಅಂಗಡಿ ಇಟ್ಕೊಂಡಿದ್ದಾರೆ. ಜೈನ್ ಉದ್ಯಮಿಯೊಬ್ಬರು ಆರಂಭಿಸಿರೋ ಉಚಿತ ಆಹಾರ ವಿತರಣೆ ಅಂಗಡಿಯಲ್ಲೂ ಸೇವೆ ಸಲ್ಲಿಸ್ತಾರೆ. ಅಶೋಕ್ ಅಲ್ಲಿ ಕಡಿ ಖಿಚಡಿ ತಯಾರಿಸಿದ್ರೆ, ಅವರ ಪತ್ನಿ ಪಾತ್ರೆ ತೊಳೆಯೋ ಕೆಲಸ ಮಾಡ್ತಾರೆ.

ನಿವೃತ್ತಿಯ ಬಳಿಕ ಅಮೃತ್ ಭಾಯಿ ಮೋದಿ ಖಾಸಗಿ ಕಂಪನಿಯೊಂದರಲ್ಲಿ ಮಷಿನ್ ಆಪರೇಟರ್ ಆಗಿ ಕೆಲಸ ಮಾಡ್ತಿದ್ದಾರೆ. ಪ್ರಹ್ಲಾದ್ ಮೋದಿ ಅಖಿಲ ಭಾರತ ನ್ಯಾಯಬೆಲೆ ಅಂಗಡಿಕಾರರ ಸಂಘಟನೆಯ ಅಧ್ಯಕ್ಷ. ಅಣ್ಣ ನರೇಂದ್ರ ಮೋದಿ ವಿರುದ್ಧವೇ ಪ್ರಹ್ಲಾದ್ ಪ್ರತಿಭಟನೆ ಕೂಡ ನಡೆಸಿದ್ದರು.

ಸೋಮ್ ಭಾಯಿ ಮೋದಿ, ಪ್ರಧಾನಿ ಮೋದಿ ಅವರ ಹಿರಿಯ ಸಹೋದರ. ಆರೋಗ್ಯ ಇಲಾಖೆಯ ನೌಕರರಾಗಿದ್ದ ಅವರು ನಿವೃತ್ತಿ ಬಳಿಕ, ಓಲ್ಡ್ ಏಜ್ ಹೋಮ್ ಒಂದನ್ನು ನಡೆಸ್ತಿದ್ದಾರೆ. ಕಿರಿಯ ಸಹೋದರ ಪಂಕಜ್ ಭಾಯಿ ಮೋದಿ ಗುಜರಾತ್ ನ ಮಾಹಿತಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸ್ತಾರೆ.

ಪ್ರಧಾನಿ ಮೋದಿ ಅವರ ತಾಯಿ ಹೀರಾ ಬೆನ್ ಕೂಡ ಪಂಕಜ್ ಅವರ ಮನೆಯಲ್ಲೇ ನೆಲೆಸಿದ್ದಾರೆ. ದಾಮೋದರ ದಾಸ್ ಮೋದಿ ಅವರಿಗೆ ಒಟ್ಟು 6 ಮಕ್ಕಳು. ಸೋಮ, ನರೇಂದ್ರ, ಅಮೃತ್, ಪ್ರಹ್ಲಾದ್, ಪಂಕಜ್ ಹಾಗೂ ವಾಸಂತಿ. ಮೋದಿ ಅವರ ಏಕೈಕ ಸಹೋದರಿ ವಾಸಂತಿ ಒಬ್ಬ ಗೃಹಿಣಿ. ಅವರ ಪತಿ ಎಲ್ ಐ ಸಿಯಲ್ಲಿ ಕೆಲಸ ಮಾಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...