alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಾಫಿಕ್ ರೂಲ್ಸ್ ಪಾಲಿಸುತ್ತ ಭದ್ರತೆಯಿಲ್ಲದೆ ಏಮ್ಸ್ ಗೆ ಬಂದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ವಿಚಾರಿಸಲು ಏಮ್ಸ್ ಗೆ ಭೇಟಿ ನೀಡಿದ್ದರು. ಮೂಲಗಳ ಪ್ರಕಾರ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಏಮ್ಸ್ ಗೆ ಬಂದಿದ್ದರಂತೆ. ಸುಮಾರು 15-20 ನಿಮಿಷಗಳ ಕಾಲ ಅಲ್ಲಿದ್ದರು ಎನ್ನಲಾಗಿದೆ.

ಪ್ರಧಾನ ಮಂತ್ರಿ ಪ್ರೋಟೋಕಾಲ್ ಇಲ್ಲದೆ ಏಮ್ಸ್ ಗೆ ಬಂದಿದ್ದರು. ತಮ್ಮ ನಿವಾಸದಿಂದ ಏಮ್ಸ್ ವರೆಗೆ ಟ್ರಾಫಿಕ್ಸ್ ನಿಯಮಗಳನ್ನು ಪಾಲಿಸುತ್ತ ಬಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಏಮ್ಸ್ ಆಸ್ಪತ್ರೆ ಸಿಬ್ಬಂದಿಗೂ ಅವ್ರು ಬರುವ ಬಗ್ಗೆ ಮಾಹಿತಿಯಿರಲಿಲ್ಲ.

ವಾಜಪೇಯಿ ಆರೋಗ್ಯದ ಬಗ್ಗೆ ಏಮ್ಸ್ ವೈದ್ಯರು ಹೊಸ ಮಾಹಿತಿಯನ್ನು ನೀಡಿಲ್ಲ. ಹಿಂದಿನ ವಾರ ಆರೋಗ್ಯದಲ್ಲಿ ಸುಧಾರಣೆ ಕಾಣ್ತಿದೆ ಎನ್ನಲಾಗಿತ್ತು. ಆದ್ರೆ ವಾಜಪೇಯಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರೆದಿದೆ. ಕಿಡ್ನಿ ಸೋಂಕಿನ ಹಿನ್ನೆಲೆಯಲ್ಲಿ 93 ವರ್ಷದ ವಾಜಪೇಯಿಯವರನ್ನು ಒಂದು ವಾರದ ಹಿಂದೆಯೇ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ 11 ರಂದು ಮೋದಿ ಏಮ್ಸ್ ಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...