alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿ ಹೆಚ್ಚು ಸುದ್ದಿಯಾದವರಲ್ಲಿ ಮೋದಿಗೇ ಟಾಪ್ ಸ್ಥಾನ

2018ರಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದ ಭಾರತೀಯರ ಪಟ್ಟಿ ತಯಾರಿಸಿರುವ ಯಾಹೂ ಪ್ರಕಾರ ಪ್ರಧಾನಿ ಮೋದಿಯೇ ಹೆಚ್ಚು ಸುದ್ದಿ ಮಾಡಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಸಹಜವಾಗಿ ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದ್ದಾರೆ.

ಮೂರನೇ ಸ್ಥಾನದಲ್ಲಿ ಸುಪ್ರಿಂಕೋರ್ಟ್ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದಾರೆ. ಆರ್ಟಿಕಲ್ 377 ಸೇರಿ ಅನೇಕ ಮೈಲಿಗಲ್ಲು ಆಗುವಂಥ ತೀರ್ಪನ್ನು ಅವರು ನೀಡಿದ್ದರು. ಉಳಿದಂತೆ ಪಟ್ಟಿಯಲ್ಲಿ ಹಣಕಾಸು ವ್ಯವಹಾರದಲ್ಲಿ ಆರೋಪಿತರಾಗಿರುವ ವಿಜಯ ಮಲ್ಯ, ನೀರವ್ ಮೋದಿ, ಮಾಜಿ ಪತ್ರಕರ್ತ ಹಾಗೂ ಕೇಂದ್ರದಲ್ಲಿ ಸಚಿವರಾಗಿದ್ದ ಎಂ.ಜೆ. ಅಕ್ಬರ್ ಹೆಸರಿದೆ.

ಈ ವರ್ಷ ಸಾಕಷ್ಟು ಫೇಕ್ ನ್ಯೂಸ್ ಹರಿದಾಡಿದೆ. ಆದರೆ, ಟಾಪ್ ಮೂರು ಫೇಕ್ ನ್ಯೂಸ್ ಪಟ್ಟಿಯಲ್ಲಿ ಪ್ರಧಾನಿ ಮೋದಿ ಓವೈಸಿ ಪಾದ ಮುಟ್ಟಿದರೇ ಎಂಬ ಪ್ರಶ್ನೆ ಇದ್ದ ತಿರುಚಲಾದ ಫೋಟೋ ಮೊದಲ ಸ್ಥಾನದಲ್ಲಿದೆ. ಮೋದಿ ಮೇಕಪ್ ಗೆ ವರ್ಷಕ್ಕೆ 15 ಲಕ್ಷ ವೆಚ್ಚ, ರಾಹುಲ್ ಗಾಂಧಿ ವೇದಿಕೆಯಲ್ಲಿ ಮಹಿಳೆ ಕೈ ಹಿಡಿದರೆಂಬ ಚಿತ್ರ ನಂತರದ ಸ್ಥಾನದಲ್ಲಿವೆ.

ಅಂದಹಾಗೆ ರಾಜಕೀಯ ಕ್ಷೇತ್ರದಲ್ಲಿ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ವರ್ಷದ ಅತಿ ಮುಖ್ಯ ಇವೆಂಟ್ ಎಂದು ಗುರುತಿಸಲಾಗಿದೆ, ಅತಿ ಹೆಚ್ಚು ಹುಡುಕಾಟವೂ ನಡೆದಿದೆ. ಆಧಾರ್ ಹ್ಯಾಕಿಂಗ್ ಸ್ಟೋರಿ ಎರಡನೇ ಸ್ಥಾನದಲ್ಲಿದೆ. ವಿಜಯ್ ಮಲ್ಯ, ನೀರವ್ ಮೋದಿ ಬಗ್ಗೆಯೂ ಸರ್ಚ್ ಎಂಜಿನ್ ನಲ್ಲಿ ಹೆಚ್ಚು ಹುಡುಕಾಟ ನಡೆಸಿರುವುದು ವಿಶೇಷ.

ಬಾಲಿವುಡ್ ತಾರೆ ಶ್ರೀದೇವಿ ಜನರಿಂದ ಅತಿ ಹೆಚ್ಚು ಹುಡುಕಾಡಲ್ಪಟ್ಟ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಸೋನಾಲಿ ಬೇಂದ್ರೆ ನಂತರದ ಸ್ಥಾನದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...