alex Certify
ಕನ್ನಡ ದುನಿಯಾ       Mobile App
       

Kannada Duniya

ಉಜ್ವಲ ಯೋಜನೆಯಡಿ ಗ್ರಾಮೀಣ ಭಾರತದ ವಿಕಾಸ: ಪ್ರಧಾನಿ ಮೋದಿ

ದೇಶದಲ್ಲಿ ಕೇವಲ ನಾಲ್ಕು ವರ್ಷಗಳ ಕಾಲಾವಧಿಯಲ್ಲಿ 10 ಕೋಟಿ ಎಲ್ ಪಿ ಜಿ ಗ್ಯಾಸ್ ಸಂಪರ್ಕವನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಕಲ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಉಜ್ವಲ ಯೋಜನೆ ಫಲಾನುಭವಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನ ಮೂಲಕ ಮಾತುಕತೆ ನಡೆಸುವ ಸಂದರ್ಭದಲ್ಲಿ ದೇಶದ ಜನತೆಗೆ ಮಾಹಿತಿ ನೀಡಿದ ಅವರು, ಹಳ್ಳಿಗಳ ಅಭಿವೃದ್ಧಿ ಮತ್ತು ಉದ್ದಾರದಿಂದ ಮಾತ್ರ ದೇಶದ ಅಭಿವೃದ್ಧಿ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಹಳ್ಳಿಗಳಲ್ಲಿರುವ ಬಡತನ ರೇಖೆಯ ಕೆಳಗಿರುವ ಹಾಗೂ ಒಲೆಗಳಲ್ಲಿ ಅಡುಗೆ ಮಾಡಿ ಕೂಲಿಗೂ ಹೋಗಿ ಜೀವನ ಸಾಗಿಸುವ ತಾಯಂದಿರಿಗಾಗಿ ನಾಲ್ಕು ಕೋಟಿ ಉಚಿತ ಎಲ್ ಪಿ ಜಿ ಸಂಪರ್ಕ ಕಲ್ಪಿಸಿದ್ದೇವೆ ಎಂದರು.

ಕಳೆದ ಐವತ್ತು ವರ್ಷಗಳಲ್ಲಿ ಈ ದೇಶದಲ್ಲಿ ಮಾಡಲಾಗದಂತಹ ಸಾಧನೆಯನ್ನು ನಾವು ಕೇವಲ ನಾಲ್ಕು ವರ್ಷಗಳಲ್ಲಿ ಮಾಡಿ ತೋರಿಸಿದ್ದೇವೆ. ಆಗ ಕೇವಲ ಉಳ್ಳವರಿಗೆ ಮಾತ್ರ ಈ ಎಲ್ ಪಿ ಜಿ ಸಂಪರ್ಕ ನೀಡಲಾಗುತ್ತಿತ್ತು. ಈಗ ಹಾಗಿಲ್ಲ, ‘ಸಬ್ ಕೆ ಸಾಥ್ ಸಬ್ ಕ ವಿಕಾಸ್’ ಎಂಬಂತೆ 10 ಕೋಟಿ ಎಲ್ ಪಿ ಜಿ ಹೊಸ ಸಂಪರ್ಕ ನೀಡಲಾಗಿದೆ. ಇದರಲ್ಲಿ 8 ಕೋಟಿಗೂ ಅಧಿಕ ಸಂಪರ್ಕಗಳನ್ನು ಬಿಪಿಎಲ್ ಕುಟುಂಬಗಳಿಗೆ ನೀಡಲಾಗಿದೆ. ನಮ್ಮ ಈ ಯೋಜನೆಯಡಿಯಲ್ಲಿ 13 ಕೋಟಿ ಗ್ಯಾಸ್ ಸಂಪರ್ಕ ನೀಡುವ ಉದ್ದೇಶವಿದ್ದು, ಇದನ್ನ 2020ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದರು.

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಈ ಕಾರ್ಯಕ್ರಮ ಇಷ್ಟರ ಮಟ್ಟಿನ ಪರಿಣಾಮಕಾರಿ ಯಶಸ್ಸಿನ ಹಿಂದೆ ಶಾಸಕರು, ಸಂಸದರು ಹಾಗೂ ಅಧಿಕಾರಿಗಳ ಶ್ರಮ ಅತ್ಯಧಿಕವಾಗಿದೆ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಬಯಸುತ್ತೇನೆ ಎಂದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...