alex Certify
ಕನ್ನಡ ದುನಿಯಾ       Mobile App
       

Kannada Duniya

ಅ.31ರಂದು ಸ್ಟ್ಯಾಚು ಆಫ್ ಯೂನಿಟಿ ಅನಾವರಣ

ಭಾರತದ ಐರನ್ ಮ್ಯಾನ್ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆ ಅನಾವರಣಕ್ಕೆ ಸಮಯ ನಿಗದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 31ರಂದು ಸ್ಟ್ಯಾಚು ಆಫ್ ಯೂನಿಟಿ ಅನಾವರಣ ಮಾಡಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿರುವ ಸಂದರ್ಭದಲ್ಲಿ ರೂಪಾನಿಯವರು ಮಾಧ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ.

ಗುಜರಾತ್ ನಲ್ಲಿರುವ ನರ್ಮದಾ ಡ್ಯಾಂಗೆ ಮುಖಮಾಡಿ ಸಿದ್ಧಪಡಿಸಿರುವ ಈ ಪ್ರತಿಮೆ 182 (597 ಅಡಿ) ಮೀಟರ್ ಎತ್ತರವಿದೆ. ಪಟೇಲ್ ಅವರ ಜನ್ಮದಿನದಂದೇ ಪ್ರತಿಮೆ ಅನಾವರಣಗೊಳಿಸಲಾಗುತ್ತಿದೆ.

ಬರೋಬ್ಬರಿ 2989 ಕೋಟಿ ರೂ. ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ದೇಶದ 6 ಲಕ್ಷ ಹಳ್ಳಿಗಳಿಂದ 5 ಸಾವಿರ ಮೆಟ್ರಿಕ್ ಟನ್ ಲೋಹ ಸಂಗ್ರಹಿಸಲಾಗಿತ್ತು. 2010ರಲ್ಲಿ ಯೋಜನೆ ಘೋಷಣೆಯಾಗಿ, 2014ರಲ್ಲಿ ಕೆಲಸ ಆರಂಭವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...