alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳೊಂದಿಗೆ ಮೋದಿ ಬರ್ತ್ ಡೇ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ 68 ನೇ ವರ್ಷಕ್ಕೆ ಕಾಲಿಡುತ್ತಿದ್ದು, ವಾರಣಾಸಿ ಸರಕಾರಿ ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು‌ ಸಿದ್ಧತೆ ನಡೆಸಿದ್ದಾರೆ.

300 ಶಾಲಾ ಮಕ್ಕಳೊಂದಿಗೆ ಹುಟ್ಟಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿರುವ ಪಿಎಂ, ಇದಕ್ಕಾಗಿ ಸೋಮವಾರ ಸಂಜೆಯೇ ವಾರಣಾಸಿಯನ್ನು‌‌ ತಲುಪಲಿದ್ದಾರೆ. ಹುಟ್ಟುಹಬ್ಬದ ವೇಳೆ, ವಾರಣಾಸಿಯ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳಿಗೆ, ಸುಮಾರು 650 ಕೋಟಿ‌ ಅನುದಾನ ಘೋಷಣೆ ಮಾಡಲಿದ್ದಾರೆ ಎಂದು ಉತ್ತರ ಪ್ರದೇಶ ಸಚಿವ‌‌ ನೀಲಕಂಠ ತಿವಾರಿ ಮಾಹಿತಿ ನೀಡಿದ್ದು, ಎರಡು ದಿ‌ನದ ಪ್ರವಾಸದಲ್ಲಿ ಮೊದಲಿಗೆ ಹಿಂದೂ ಬನಾರಸ್ ವಿವಿಯಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಈ‌ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಮೋದಿ‌ ಅವರ 68ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ, ಉತ್ತರ ಪ್ರದೇಶ‌ದ 68 ಭಾಗದಲ್ಲಿ 68 ಕೆಜಿಯ ಕೇಕ್ ಕತ್ತರಿಸಲಾಗುವುದು. ಇದರೊಂದಿಗೆ ಮುಂದಿನ ದಿನದಲ್ಲಿ ಮತ್ತಷ್ಟು ಶಕ್ತಿ ಸಿಗಲಿ ಎನ್ನುವ ಉದ್ದೇಶದಿಂದ 68 ದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿದೆ. ರಾಜ್ಯದೆಲ್ಲೆಡೆ ಪಕ್ಷದ ಕಾರ್ಯಕರ್ತರು ಸರಕಾರಿ ಶಾಲೆಗಳಿಗೆ ತೆರಳಿ ಮಕ್ಕಳೊಂದಿಗೆ ಹುಟ್ಟುಹಬ್ಬ‌ ಸಂಭ್ರಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮೋದಿ ಆಗಮಿಸುತ್ತಿರುವುದರಿಂದ ವಾರಣಾಸಿಯಲ್ಲಿ ಭಾರಿ ಬಿಗಿ ಭದ್ರತೆ ಆಯೋಜಿಸಲಾಗಿದ್ದು, ಸುಮಾರು 12 ಸಾವಿರ ಪೊಲೀಸರನ್ನು‌ ನಿಯೋಜಿಸಲಾಗಿದೆ‌. ಮಂಗಳವಾರ ಸಂಜೆ ಮೋದಿ ಅವರು ಕಾಶಿ‌ ವಿಶ್ವನಾಥನ ದರ್ಶನ ಪಡೆಯಲಿದ್ದಾರೆ‌. ಬಳಿಕ ಐದು ಸಾವಿರ‌ ಮಕ್ಕಳೊಂದಿಗೆ ಹಾಗೂ ಕೆಲ ಬಿಜೆಪಿ ಕಾರ್ಯಕರ್ತರೊಂದಿಗೆ ಸಿನಿಮಾ‌ ವೀಕ್ಷಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...