alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಮೋದಿಯವರ ತದ್ರೂಪಿ ಫೋಟೋ

modi

ಜಗತ್ತಿನಲ್ಲಿ ಒಬ್ಬನಂತೆ 12 ಜನರಿರ್ತಾರಂತೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೋಲುವ ವ್ಯಕ್ತಿಯೊಬ್ಬನನ್ನು ಇಂಟರ್ನೆಟ್ ಪತ್ತೆ ಮಾಡಿದೆ. ಥೇಟ್ ಮೋದಿಯಂತೆ ಕಾಣುವ ವ್ಯಕ್ತಿಯೊಬ್ರು ರೈಲ್ವೆ ಸ್ಟೇಶನ್ ನಲ್ಲಿ ಹೆಗಲಿಗೆ ಬ್ಯಾಗ್ ಏರಿಸಿಕೊಂಡು, ಕೈಯಲ್ಲಿ ಮೊಬೈಲ್ ಹಿಡಿದು ಕಾಯ್ತಾ ಇರೋ ಫೋಟೋ ವೈರಲ್ ಆಗಿದೆ.

ಆಲ್ ಇಂಡಿಯಾ ಬಕ್ಚೋಡ್ ಎಂಬ ಕಾಮಿಡಿ ಗ್ರೂಪ್ ಇದನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿತ್ತು. ಪಕ್ಕದಲ್ಲಿ ಮೋದಿ ಫೋಟೋಗೆ ಸ್ನಾಪ್ ಚಾಟ್ ಡಾಗ್ ಫಿಲ್ಟರ್ ಅಳವಡಿಸಿ ಹಾಕಲಾಗಿತ್ತು. ಕೆಲವರು ಇದನ್ನು ನೋಡಿ ತಮಾಷೆ ಅಂದ್ಕೊಂಡ್ರೆ ಇನ್ನು ಕೆಲವರು ಗರಂ ಆಗಿದ್ದಾರೆ.

 

ಮೋದಿ ಫೋಟೋಗೆ ನಾಯಿ ಮುಖ ಅಳವಡಿಸಿರುವ ಎಐಬಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮೂಲಕ ಎಐಬಿ ದೇಶದ ಪ್ರಧಾನಿಗೆ ಅವಮಾನಿಸಿದೆ ಅಂತಾ ಕಿಡಿಕಾರಿದ್ದಾರೆ. ಟ್ವಿಟ್ಟರ್ ಬಳಕೆದಾರರ ಟ್ರೋಲ್ ತಡೆದುಕೊಳ್ಳಲಾಗದೆ ಕೊನೆಗೆ ಎಐಬಿ ಪೋಸ್ಟ್ ಡಿಲೀಟ್ ಮಾಡಿದೆ.

ಆದ್ರೆ ಎಐಬಿ ಸಂಸ್ಥಾಪಕ ತನ್ಮಯ್ ಭಟ್ ಮಾತ್ರ ಅಹಂಕಾರದ ಮಾತನಾಡಿದ್ದಾರೆ. ಟ್ವಿಟ್ಟರ್ ಟ್ರೋಲ್ ಗೆ ನಾವು ತಲೆಕೆಡಿಸಿಕೊಳ್ಳೋದಿಲ್ಲ, ಅಗತ್ಯ ಬಿದ್ರೆ ಮತ್ತೆ ಜೋಕ್ ಮಾಡ್ತೀವಿ, ಡಿಲೀಟ್ ಕೂಡ ಮಾಡೋಕೆ ರೆಡಿ ಎಂದಿದ್ದಾರೆ. ಇದಕ್ಕೆ ಖುದ್ದು ಮೋದಿ ರಿಯಾಕ್ಟ್ ಮಾಡಿದ್ದು, ಸಾರ್ವಜನಿಕ ಜೀವನದಲ್ಲಿ ನಮಗೆ ಇನ್ನಷ್ಟು ತಮಾಷೆ ಬೇಕು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...