alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗ ದಿನದ ಹಿನ್ನೆಲೆ: ಹಾವು, ಕೋತಿ ಹಿಡಿಯಲು ಮುಂದಾದ ಅರಣ್ಯ ಸಿಬ್ಬಂದಿ

ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನ. ದೇಶದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಡೆಹ್ರಾಡೂನ್ ನ ಎಫ್ ಆರ್ ಐನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 60 ಸಾವಿರ ಜನರ ಜೊತೆ ಮೋದಿ ಯೋಗ ಮಾಡಲಿದ್ದಾರೆ.

ಕಾರ್ಯಕ್ರಮಕ್ಕೆ ತಯಾರಿ ಜೋರಾಗಿ ನಡೆದಿದೆ. ಪೊಲೀಸ್, ಸ್ಥಳೀಯ ಆಡಳಿತದ ಜೊತೆ ಅರಣ್ಯ ಇಲಾಖೆ ಕೂಡ ತಯಾರಿಯಲ್ಲಿ ಕೈ ಜೋಡಿಸಿದೆ. ಯೋಗ ಕಾರ್ಯಕ್ರಮ ನಡೆಯುವ ಮೈದಾನದ ಸುತ್ತಮುತ್ತ ಹಾವು ಹಾಗೂ ಮಂಗಗಳು ಬರದಂತೆ ವ್ಯವಸ್ಥೆ ಮಾಡಲಾಗ್ತಿದೆ. ಡಿಎಂ ಆದೇಶದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಈ ಕೆಲಸದಲ್ಲಿ ನಿರತರಾಗಿದ್ದಾರೆ.

ಮೈದಾನದ ಸುತ್ತಮುತ್ತ ಪರಿಶೀಲನೆ ನಡೆಸಲಾಗಿದೆ. ಕಾರ್ಯಕ್ರಮ ಮುಗಿಯುವವರೆಗೂ ಎರಡು ತಂಡ ಸ್ಥಳದಲ್ಲಿರಲಿದೆ. ಮೈದಾನದ ಸುತ್ತಮುತ್ತ ಒಂದೂ ಕೋತಿ ಸಿಕ್ಕಿಲ್ಲ. ಎರಡು ಹಾವನ್ನು ಹಿಡಿಯಲಾಗಿದೆ ಎಂದು ಡಿಎಫ್ಒ ಹೇಳಿದ್ದಾರೆ. ಎಫ್ ಆರ್ ಐ ಕ್ಯಾಂಪಸ್ 450 ಹೆಕ್ಟೇರ್ ಪ್ರದೇಶದಲ್ಲಿದೆ. ಇಲ್ಲಿ ಅನೇಕ ಬಾರಿ ಹಾವು, ಕೋತಿ ಕಾಣಿಸಿಕೊಂಡಿದೆ. 2015ರಲ್ಲಿ ಚಿರತೆ ದಾಳಿಗೆ 16 ವರ್ಷದ ಹುಡುಗ ಬಲಿಯಾಗಿದ್ದ. ಹಾಗಾಗಿ ಸ್ಥಳದಲ್ಲಿ ಬಿಗಿ ಭದ್ರತೆ ವಹಿಸಲಾಗ್ತಿದೆ.

ಬೆಳಿಗ್ಗೆ ನಾಲ್ಕು ಗಂಟೆಯೊಳಗೆ ಎಫ್ ಆರ್ ಐ ಕ್ಯಾಂಪ್ ಗೆ ತೆರಳಬೇಕು. ರಾತ್ರಿ 12 ಗಂಟೆಯಿಂದಲೇ ಪ್ರವೇಶ ಸಿಗಲಿದೆ. ಯೋಗ ಮಾಡುವವರಿಗೆ ಟೀ ಶರ್ಟ್ ಹಾಗೂ ಮ್ಯಾಟನ್ನು ಆಡಳಿತ ಮಂಡಳಿ ನೀಡಲಿದೆ. 50 ಸಾವಿರ ನೀರಿನ ಬಾಟಲಿ ವ್ಯವಸ್ಥೆ ಮಾಡಲಾಗಿದೆ. 40 ನೀರಿನ ಟ್ಯಾಂಕರ್ ಸ್ಥಳದಲ್ಲಿರಲಿದೆ. ಸ್ಥಳದಲ್ಲಿ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...