alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಣಬ್ ಮುಖರ್ಜಿಗೆ ತಂದೆ ಸ್ಥಾನ ನೀಡಿದ ಮೋದಿ

modi_pranab_750_1499008046_618x347

ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ತಂದೆ ಸ್ಥಾನ ನೀಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮೋದಿ, ಪ್ರಣಬ್ ದಾ ತಂದೆ ಸ್ಥಾನದಲ್ಲಿ ನಿಂತು ನನ್ನನ್ನು ನೋಡಿಕೊಂಡಿದ್ದಾರೆಂದು ರಾಷ್ಟ್ರಪತಿಯವರನ್ನು ಹೊಗಳಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರೆಸಿಡೆಂಟ್ ಎ ಸ್ಟೇಟ್ಮೆಂಟ್ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮೋದಿ ರಾಷ್ಟ್ರಪತಿಯವರನ್ನು ಮನಬಿಚ್ಚಿ ಹೊಗಳಿದ್ರು. ಪ್ರಣಬ್ ದಾ ತಂದೆ ಸ್ಥಾನದಲ್ಲಿ ನಿಂತು ನನ್ನನ್ನು ನೋಡಿಕೊಂಡಿದ್ದಾರೆ. ಅವರಿಗೆ ಸದಾ ನನ್ನ ಆರೋಗ್ಯದ ಬಗ್ಗೆ ಚಿಂತೆ. ಆರೋಗ್ಯದ ಬಗ್ಗೆಯೂ ಗಮನ ನೀಡು ಎಂದು ಆಗಾಗ ಅವರು ಹೇಳ್ತಾರೆಂದು ಮೋದಿ ಹೇಳಿದ್ದಾರೆ.

ಪ್ರಣಬ್ ಮುಖರ್ಜಿಯವರನ್ನು ಎಂದೂ ಮರೆಯಲು ಸಾಧ್ಯವಿಲ್ಲ. ನಾನು ದೆಹಲಿಗೆ ಬಂದಾಗ ನನ್ನ ಕೈ ಬೆರಳು ಹಿಡಿದು ನಡೆಸಿದ್ದಾರೆಂದು ಮೋದಿ ಹೇಳಿದ್ದಾರೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರವಧಿ ಇದೇ ತಿಂಗಳು ಕೊನೆಗೊಳ್ಳಲಿದೆ. ಜುಲೈ 17ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ರಾಮ್ನಾಥ್ ಕೋವಿಂದ ಹಾಗೂ ಮೀರಾ ಕುಮಾರ್ ಅಖಾಡದಲ್ಲಿದ್ದು, ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...