alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರ ಈ ಕಾರ್ಯಕ್ಕೆ ಬೆರಗಾದ್ರು ಸೆಷಲ್ಸ್ ಅಧ್ಯಕ್ಷರು

ಸೈನಿಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಇರುವ ಕಾಳಜಿ ಎಂತದ್ದು ಅನ್ನೋದು ರಾಷ್ಟ್ರಪತಿ ಭವನದಲ್ಲಿ ನಡೆದ ಘಟನೆಯೊಂದರಿಂದ ಮತ್ತೊಮ್ಮೆ ಸಾಬೀತಾಯ್ತು.

ಸೋಮವಾರದಂದು ಭಾರತಕ್ಕೆ ಭೇಟಿ ನೀಡಿದ ಸೆಷಲ್ಸ್ ಅಧ್ಯಕ್ಷರಾದ ಡ್ಯಾನಿ ಫೌರ್ಗೆ ಭಾರತೀಯ ವಾಯುದಳದ ಸೈನಿಕರು ಗಾರ್ಡ್ ಆಫ್ ಹಾನರ್ ಸಲ್ಲಿಸುವ ವೇಳೆ ಸೈನಿಕರೊಬ್ಬರು ಕುಸಿದುಬಿದ್ದರು.

ಕೂಡಲೇ ಮೋದಿ ಆ ಸೈನಿಕರ ಸಹಾಯಕ್ಕೆ ಬಂದರು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಯೋಧನಿಗೆ ಸಲಹೆ ನೀಡಿದ್ರು. ಬಿಸಿಲಿನ ಝಳಕ್ಕೆ ಸುಸ್ತಾಗಿ ಬಿದ್ದ ಆ ಸೈನಿಕನನ್ನ ಆನಂತರ ಆಸ್ಪತ್ರೆಗೆ ದಾಖಲಿಸಲಾಯ್ತು. 

ಈ ಕಾರ್ಯಕ್ರಮ ಮುಗಿದ ಬಳಿಕವೂ ಪ್ರಧಾನಿ ಆಸ್ಪತ್ರೆಗೆ ತೆರಳಿ ಯೋಧನ ಯೋಗಕ್ಷೇಮ ವಿಚಾರಿಸಿದರು. ದ್ವಿಪಕ್ಷೀಯ ಮಾತುಕತೆಗಾಗಿ ಭಾರತಕ್ಕೆ ಬಂದಿರುವ ಸೆಷಲ್ಸ್ ನ ಅಧ್ಯಕ್ಷರಾದ ಡ್ಯಾನಿ ಫೌರ್, ಮೋದಿ ಯೋಧನನ್ನ ಆರೈಕೆ ಮಾಡಿದ ರೀತಿಯನ್ನ ಕಂಡು ಬೆರಗಾದರು. ಅಷ್ಟೇ ಅಲ್ಲ ನಮೋ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...