alex Certify
ಕನ್ನಡ ದುನಿಯಾ       Mobile App
       

Kannada Duniya

‘ಮನ್ ಕಿ ಬಾತ್’ನಲ್ಲಿ ಮೋದಿ ಹೇಳಿದ್ದೀಗೆ….

ನವದೆಹಲಿ: ಇಂದು ಸಂವಿಧಾನದ ನಿರ್ಮಾತೃಗಳನ್ನು ಸ್ಮರಿಸುವ ದಿನವಾಗಿದೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ಸಂಕಲ್ಪವನ್ನು ಮಾಡುವ ದಿನವಾಗಿದೆ. ಆದರೆ, ಇದೇ ದಿನದಂದು 9 ವರ್ಷಗಳ ಹಿಂದೆ ಮುಂಬೈನಲ್ಲಿ ಉಗ್ರರ ದಾಳಿ ನಡೆದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆಕಾಶವಾಣಿಯಲ್ಲಿ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಮೋದಿ, ಭಾರತ ಕಳೆದ 40 ವರ್ಷಗಳಿಂದ ಉಗ್ರರ ದಾಳಿಗೆ ತುತ್ತಾಗುತ್ತಿದೆ. ಭಯೋತ್ಪಾದನೆ ಜಗತ್ತಿಗೆ ಶಾಪವಾಗಿದೆ. ಇಡೀ ವಿಶ್ವವೇ ಭಯೋತ್ಪಾದನೆ ನಿರ್ಮೂಲನೆಗೆ ಮುಂದಾಗಬೇಕಿದೆ ಎಂದಿದ್ದಾರೆ.

ಮಣ್ಣಿಗೂ ಆಹಾರಕ್ಕೂ ಅವಿನಾಭಾವ ಸಂಬಂಧವಿದೆ. ಮಣ್ಣಿನ ಸಂರಕ್ಷಣೆಯಿಂದಾಗಿ ಫಲವತ್ತತೆ ಹೆಚ್ಚಾಗಿದ್ದು, ಇದರಿಂದ ಗೋಧಿ ಬೆಳೆ ಉತ್ಪಾದನೆ ಮತ್ತು ಆದಾಯದಲ್ಲಿಯೂ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ನಮ್ಮ ದಿವ್ಯಾಂಗ ಬಂಧುಗಳು ಅಮೋಘ ಸಾಧನೆ ಮಾಡಿದ್ದಾರೆ. ದಿವ್ಯಾಂಗ ಕ್ರೀಡಾಪಟುಗಳು ಸಾಧನೆ ಮಾಡಿರುವುದು ಶ್ಲಾಘನೀಯ ಮತ್ತು ಸ್ಪೂರ್ತಿಯಾಗಿದೆ. ಅದೇ ರೀತಿ ಯೋಧರು ಯುದ್ಧಕಾಲದಲ್ಲಿ ಮಾತ್ರವಲ್ಲ, ಶಾಂತಿಯ ಕಾಲದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನೌಕಾದಳ ಮೀನುಗಾರರ ರಕ್ಷಣೆ, ಪ್ರವಾಹ ಸ್ಥಿತಿ ಮೊದಲಾದ ಸಂದರ್ಭದಲ್ಲಿ ಮಾನವೀಯ ಕಾರ್ಯ ಕೈಗೊಂಡಿದೆ. ಸೇನೆಯ ಎಲ್ಲಾ ವಿಭಾಗಗಳು ಸೇವೆ ಸಲ್ಲಿಸುತ್ತಿವೆ. ಡಿಸೆಂಬರ್ 7 ರಂದು ಸೇನಾ ದಿವಸ್ ಆಗಿದ್ದು, ಎಲ್ಲರೂ ಯೋಧರ ಕಲ್ಯಾಣಕ್ಕೆ ಶ್ರಮಿಸೋಣ ಎಂದು ಕರೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...