alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಲಂಕಾದಲ್ಲಿನ ಅಂಬುಲೆನ್ಸ್‌ ಸೇವೆ ಉದ್ಘಾಟಿಸಿದ ಪ್ರಧಾನಿ ಮೋದಿ

ಶ್ರೀಲಂಕಾದಲ್ಲಿನ ಭಾರತ ನೆರವಿನ ಅಂಬುಲೆನ್ಸ್‌ ಸೇವೆಯನ್ನು ವಿಡಿಯೋ ಲಿಂಕ್‌ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಶ್ರೀಲಂಕಾದ 2 ಭಾಗಗಳಲ್ಲಿ ಈ ಹೊಸ ವ್ಯವಸ್ಥೆ ಜಾರಿಗೊಂಡಿದ್ದು, ಕ್ರಮೇಣ ಉಳಿದ 7 ಭಾಗಗಳಿಗೂ ವಿಸ್ತರಣೆಗೊಳ್ಳಲಿದೆ.

ಜಾಫ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್‌ ವ್ಯವಸ್ಥೆ ಮೂಲಕ ಹೊಸ ಸೇವೆಯನ್ನು ಉದ್ಘಾಟಿಸಿದ ಮೋದಿಯವರು, ಶ್ರೀಲಂಕಾದ ಉತ್ತಮ ಹಾಗೂ ಕೆಟ್ಟ ದಿನಗಳಲ್ಲಿ ಭಾರತದ ತುರ್ತು ಸೇವೆ, ವ್ಯವಸ್ಥೆ, ಸಹಕಾರಗಳು ಇದ್ದೇ ಇರುತ್ತದೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಬಾಂಧವ್ಯ ವೃದ್ಧಿಗೆ ಇಂತಹ ಸೇವೆಗಳು ಹೆಚ್ಚಿನ ಪ್ರಾಮುಖ್ಯತೆ ನೀಡಲಿವೆ ಎಂದರು.

ದೇಶದಲ್ಲಿ ಅನೇಕ ಹೊಸ ವಿಚಾರ, ಹೊಸತನಗಳು ಆರಂಭಗೊಳ್ಳುತ್ತಿದ್ದು, ಅಲ್ಲಿನ ಜನರು ಇದನ್ನು ಅನುಭವಿಸಬೇಕು. 2 ದೇಶದ ಜನರು ಇನ್ನಷ್ಟು ಹತ್ತಿರವಾಗುವ ಮೂಲಕ ಹೊಸತನವನ್ನು ವಿನಿಮಯ ಮಾಡಿಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಕಳೆದ ಬಾರಿಯ ಶ್ರೀಲಂಕಾದ ಭೇಟಿ ವೇಳೆ, ತುರ್ತು ವೈದ್ಯಕೀಯ ಸೇವೆಗಳಲ್ಲಿ ಭಾರತ ಅಗತ್ಯ ಸೇವೆಗಳನ್ನು ಶ್ರೀಲಂಕಾದಲ್ಲಿ ನೀಡುತ್ತದೆ ಎಂದು ಘೋಷಿಸಲಾಗಿತ್ತು. ಭಾರತದ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು, ಸಮಯಕ್ಕೆ ಸರಿಯಾಗಿ ನೀಡಿದ ಭರವಸೆಯನ್ನು ಪೂರೈಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಶ್ರೀಲಂಕಾ, ಭಾರತದ ಕೇವಲ ನೆರೆ ರಾಷ್ಟ್ರ ಮಾತ್ರ ಆಗಿಲ್ಲ. ದಕ್ಷಿಣ ಏಷ್ಯಾ ಹಾಗೂ ಹಿಂದೂ ಮಹಾಸಾಗರದಲ್ಲಿ ಭರವಸೆಯ ಪಾಲುದಾರ ಎಂದು ಗುರುತಿಸಿಕೊಂಡಿದೆ ಎಂದರು. ಈ ವೇಳೆ ಶ್ರೀಲಂಕಾ ಪ್ರಧಾನಿ ಪಾಲ್ಗೊಂಡರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...