alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪು ಪದ ಬಳಕೆಯಿಂದ ನಗೆಪಾಟಲಿಗೀಡಾದ ರಾಹುಲ್

ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ರಾಹುಲ್ ಇಂಗ್ಲೀಷ್ ಹಾಗೂ ಹಿಂದಿ ಎರಡೂ ಭಾಷೆಯಲ್ಲೂ ಭಾಷಣ ಮಾಡಿದ್ರು. ಭಾಷಣದ ಮಧ್ಯೆ ರಾಹುಲ್ ಗಾಂಧಿ, ಮೋದಿಯರಿಗೆ ಹಿಂದಿಯಲ್ಲಿ ತಮ್ಮ ಭಾವನೆಗಳನ್ನು ತಿಳಿಸುವ ಇರಾದೆ ಹೊಂದಿದ್ದರು. ಆದ್ರೆ, ಸರಿಯಾದ ಪದ ಬಳಸದೆ ನಗೆಪಾಟಲಿಗೆ ಈಡಾದ್ರು.

ಅಸಲಿಗೆ ರಾಹುಲ್, ಪ್ರಧಾನ ಮಂತ್ರಿ ‘ಅಪನಿ ಆಂಖ್ ಮೇರಿ ಆಂಖ್ ಮೇ ನಹಿ ಡಾಲ್ ಸಕ್ತೆ’ ಎಂದು ಹೇಳಿದ್ರು. ಇದ್ರಿಂದ ಬಿಜೆಪಿ ಸಂಸದರು ನಕ್ಕು ಬಿಟ್ಟರು. ಲೋಕಸಭೆಯಲ್ಲಿ ರಾಹುಲ್, ಮೋದಿ ಅವರು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರರು ಎಂದು ಹೇಳಬೇಕಿತ್ತು.

ತದನಂತರ ರಾಹುಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಮೋದಿರವರು ನನ್ನನ್ನು ನೋಡಿ ನಗುತ್ತಿದ್ದಾರೆ. ಅವರಿಗೆ ಒಳಗಡೆ ಭಯ ಶುರುವಾಗಿದೆ. ಪಿಎಂ ನನ್ನ ದೃಷ್ಟಿ ತಪ್ಪಿಸುತ್ತಿದ್ದಾರೆ. ಪ್ರಧಾನಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಿಲ್ಲ ಎಂದು ತಿಳಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...