alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹ ಪೀಡಿತ ಗುಜರಾತ್ ಗೆ 500 ಕೋಟಿ ರೂ.

pm-vymanik

ಅಹಮದಾಬಾದ್: ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ನಲುಗಿರುವ ಗುಜರಾತ್ ಗೆ, ತುರ್ತು ಕಾರ್ಯ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ 500 ಕೋಟಿ ರೂ. ನೆರವು ಘೋಷಿಸಿದ್ದಾರೆ.

ಉತ್ತರ ಗುಜರಾತ್ ನ ನೆರೆಹಾನಿ ಪ್ರದೇಶಗಳಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೊಂದಿಗೆ ವೈಮಾನಿಕ ಸಮೀಕ್ಷೆ ನಡೆಸಿದ ಮೋದಿ, ಅಹಮದಾಬಾದ್ ನಲ್ಲಿ ಸಚಿವರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

83 ಮಂದಿ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಗಾಯಾಳುಗಳಿಗೆ 50,000 ರೂ. ಘೋಷಿಸಿದ್ದು, ತುರ್ತು ಕಾರ್ಯಗಳಿಗೆ 500 ಕೋಟಿ ರೂ. ನೀಡುವುದಾಗಿ ತಿಳಿಸಿದ್ದಾರೆ.

ನಿರಂತರ ಮಳೆ, ಪ್ರವಾಹದಿಂದಾಗಿ ಗುಜರಾತ್ ನಲುಗಿದೆ. ಅನೇಕ ಹಳ್ಳಿಗಳು ಜಲಾವೃತಗೊಂಡಿವೆ. ಮುಂಗಾರು ಮಳೆಯ ಅಬ್ಬರಕ್ಕೆ ಇದುವರೆಗೆ 83 ಮಂದಿ ಮೃತಪಟ್ಟಿದ್ದಾರೆ.

ನೆರೆ ರಾಜ್ಯ ರಾಜಸ್ತಾನದ ಅಣೆಕಟ್ಟುಗಳಿಂದ ನೀರು ಬಿಡಲಾಗಿದ್ದು, ಗುಜರಾತ್ ನಲ್ಲಿ ಭಾರೀ ಪ್ರವಾಹಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...