alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಯುಷ್ಮಾನ್ ಭಾರತ್’ ಯಶಸ್ಸಿಗೆ ಪ್ರಧಾನಿ ಮೋದಿ ಹೇಳಿರೋದೇನು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್ ಭಾರತ್ ಗೆ ಇಂದು ಚಾಲನೆ ನೀಡಲಾಗಿದೆ. ಪ್ರಕಟಣೆ ಮೂಲಕ ದೇಶದಲ್ಲಿ ಅತಿದೊಡ್ಡ ಆರೋಗ್ಯಸೇವಾ ಯೋಜನೆಯ ಆರಂಭವನ್ನು ಮನೆಮನೆಗೆ ತಲುಪಿಸಲಾಗಿದೆ.

ಭಾನುವಾರದಿಂದ ಅರ್ಧ ಬಿಲಿಯನ್ ನಾಗರಿಕರು “ಮೋದಿಕೇರ್” ಎಂದೇ ಕರೆಯಲ್ಪಡುವ ಈ ಆರೋಗ್ಯ ವಿಮಾ ಯೋಜನೆಗೆ ಒಳಪಡಲಿದ್ದಾರೆ. ಇದು ಹೇಗೆ ಕೆಲಸ ಮಾಡುತ್ತದೆ ಹಾಗೂ ಎಷ್ಟು ವೆಚ್ಚವಾಗಲಿದೆ ಎಂಬ ಬಗ್ಗೆ ಯಾರಿಗೂ ಇನ್ನೂ ನಿಖರವಾಗಿ ಗೊತ್ತಿಲ್ಲದಿದ್ದರೂ ಸರ್ಕಾರ ದೊಡ್ಡ ಮಟ್ಟದಲ್ಲಿ ಯೋಜನೆ ಜಾರಿಗೊಳಿಸಲು ಮುಂದಾಗಿದೆ.

ಖಾಸಗಿ ಆಸ್ಪತ್ರೆಗಳೊಂದಿಗೂ ಪಾಲುದಾರಿಕೆ ಹೊಂದಿದ್ದು, ಸಾಂಪ್ರದಾಯಿಕ, ಯೋಗ ಸಹಿತ ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಇದೊಂದು ಅತ್ಯಂತ ದೊಡ್ಡ ಭಾರತೀಯ ಕಾರ್ಯಕ್ರಮ ಎಂದು ಈ ಯೋಜನೆಯ ಹಿಂದಿನ ಶಕ್ತಿಯಾಗಿರುವ ಅಧಿಕಾರಿ ವಿನೋದ್ ಕೆ. ಪೌಲ್ ಹೇಳುತ್ತಾರೆ.

ಈ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಖಾಲಿ ಚೆಕ್‌ಗೆ ಸಹಿ ಮಾಡಿಕೊಟ್ಟ ರೀತಿಯಲ್ಲಿ ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿದ್ದಾರೆ. ವೆಚ್ಚ ಎಷ್ಟಾದರೂ ಸರಿ ಅದು ಯಶಸ್ವಿಯಾಗಿ ಪ್ರತಿಯೊಬ್ಬ ಭಾರತೀಯನಿಗೂ ತಲುಪಬೇಕೆಂದು ಸಂಬಂಧಪಟ್ಟವರಿಗೆ ಹೇಳಿದ್ದಾರೆನ್ನಲಾಗಿದೆ.

ಅಂತಿಮ ಬಜೆಟ್ ಅನ್ನು ಈಗಲೇ ಹೇಳಲು ಸಾಧ್ಯವಿಲ್ಲ, ಯಾಕೆಂದರೆ ಈ ಹಿಂದೆ ಇಂತಹ ಯೋಜನೆಯ ಪ್ರಯತ್ನ ನಡೆದಿರಲಿಲ್ಲ. ಸರ್ಕಾರ ಸದ್ಯಕ್ಕೆ 4.8 ಬಿಲಿಯನ್ ಡಾಲರ್ ಅನುದಾನ ನೀಡಿದೆ. ಬೇಡಿಕೆ ಮೇರೆಗೆ ಇನ್ನಷ್ಟು ಹಣಕಾಸು ನೆರವು ಒದಗಿಸುವ ವಾಗ್ದಾನ ನೀಡಿದೆ ಎಂದು ವಿನೋದ್ ವಿವರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...