alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶಿಷ್ಟ ರೀತಿಯಲ್ಲಿ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ಮೋದಿ

ಭಾರತದ ಪ್ರಧಾನಿ ನರೇಂದ್ರ ಮೋದಿ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ದೇಶದ ಹಲವು ಮಹಿಳಾ ಸಾಧಕಿಯರನ್ನ ಟ್ವಿಟ್ಟರ್ ನಲ್ಲಿ ಫಾಲೋ ಮಾಡುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. 55 ಮಹಿಳೆಯರನ್ನ ಮೋದಿ ತಮ್ಮ ಪರ್ಸನಲ್ ಟ್ವಿಟ್ಟರ್ ನಲ್ಲಿ ಫಾಲೋ ಮಾಡಿದ್ದಾರೆ. ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ಸಾನಿಯಾ ಮಿರ್ಜಾ, ಕರ್ಮನ್ ಕೌರ್, ಅಥ್ಲೀಟ್ ಪಿ.ಟಿ. ಉಷಾ, ಮಾಜಿ ಮಿಸ್ ಇಂಡಿಯಾ ಸ್ವರೂಪ , ಪತ್ರಕರ್ತೆ ರೋಮನಾ ಇಸಾರಾ ಕರ್ರನ್ನು ನಮೋ ಫಾಲೋ ಮಾಡಿದ್ದಾರೆ.

ಇಷ್ಟೇ ಅಲ್ಲ ನಟಿಯರಾದ ಕೋನೇನ್ ಮಿತ್ರಾ, ವೇಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿ, ಫೋಟೋ ಜರ್ನಲಿಸ್ಟ್ ರೇಣುಕಾ ಪುರಿ ಸೇರಿದಂತೆ ತಮ್ಮ ಸಂಪುಟದ ಮಹಿಳಾ ಸಚಿವರನ್ನೂ ಮೋದಿ ಫಾಲೋ ಮಾಡಿದ್ದಾರೆ. ಮೋದಿ ಫಾಲೋ ಮಾಡಿದ 55 ಮಹಿಳೆಯರು ಪ್ರಧಾನಿಯವರಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ಕೋರಿದ್ದಾರೆ.

ತಮ್ಮ ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ 2000 ಮಂದಿಯನ್ನ ಮೋದಿ ಫಾಲೋ ಮಾಡ್ತಿದ್ದಾರೆ. ಒಟ್ಟು 43.7 ಮಿಲಿಯನ್ ಮಂದಿ ಟ್ವಿಟ್ಟರ್ ನಲ್ಲಿ ಮೋದಿ ಅವರನ್ನ ಫಾಲೋ ಮಾಡ್ತಿದ್ದಾರೆ. ಪ್ರಧಾನ ಮಂತ್ರಿಯವರ ಟ್ವಿಟ್ಟರ್ ಖಾತೆಯಲ್ಲಿ ಮೋದಿ ವಿಶ್ವ ನಾಯಕರು ಸೇರಿದಂತೆ 438 ಮಂದಿಯನ್ನ ಫಾಲೋ ಮಾಡ್ತಿದ್ದಾರೆ. ಈ ಟ್ವಿಟ್ಟರ್ ಖಾತೆಯಲ್ಲಿ ಮೋದಿಯವರಿಗೆ 26.9 ಮಿಲಿಯನ್ ಮಂದಿ ಹಿಂಬಾಲಕರಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...