alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಇರುವುದನ್ನು ಒಪ್ಪಲು ಷರತ್ತು ಹಾಕಿದ ಮೋದಿ

ಛತ್ತೀಸ್ ಗಡದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಪ್ರಚಾರ ಸಮರ ತಾರಕಕ್ಕೇರಿದ್ದು, ಅಂಬಿಕಾಪುರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷಕ್ಕೆ ಸವಾಲೊಂದನ್ನು ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷ, ನೆಹರು ಕುಟುಂಬದವರಲ್ಲದ ಉತ್ತಮ ನಾಯಕರೊಬ್ಬರನ್ನು ಐದು ವರ್ಷಗಳ ಕಾಲ ಅಧ್ಯಕ್ಷರನ್ನಾಗಿಸಿದರೆ ಆ ಪಕ್ಷದಲ್ಲಿ ಪ್ರಜಾಪ್ರಭುತ್ವವಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಚಾಯ್ ವಾಲಾನೊಬ್ಬ ಈ ದೇಶದ ಪ್ರಧಾನಿಯಾಗಿರುವುದರ ಕುರಿತು ಅವರುಗಳಿಗೆ ಅರ್ಥವಾಗಿಲ್ಲವೆಂದು ವ್ಯಂಗ್ಯವಾಡಿರುವ ನರೇಂದ್ರ ಮೋದಿಯವರು, ನಾನು ಅಧಿಕಾರಕ್ಕೇರಿ ನಾಲ್ಕೂವರೆ ವರ್ಷಗಳಾದರೂ ಇನ್ನೂ ಅಳುತ್ತಲೇ ಇದ್ದಾರೆಂದು ಟೀಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...