alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಧರೊಂದಿಗೆ ಮೋದಿ ದೀಪಾವಳಿ

ನವದೆಹಲಿ: ಪ್ರತಿ ವರ್ಷ ಯೋಧರೊಂದಿಗೆ ದೀಪಾವಳಿ ಆಚರಿಸುವ ಪ್ರಧಾನಿ ನರೇಂದ್ರ ಮೋದಿ, ಇಂದು ಜಮ್ಮು ಮತ್ತು ಕಾಶ್ಮೀರದ ಗುರೇಝ್ ಸೆಕ್ಟರ್ ನಲ್ಲಿ ದೀಪಾವಳಿ ಆಚರಿಸಿದ್ದಾರೆ.

ಕಾಶ್ಮೀರಕ್ಕೆ ದೀಪಾವಳಿಯಲ್ಲಿ ಇದು ಅವರ 2 ನೇ ಸಲದ ಭೇಟಿಯಾಗಿದೆ. ಪ್ರಧಾನಿ ಸೇನಾ ನೆಲೆಗೆ ಆಗಮಿಸಿ ಯೋಧರ ಜೊತೆಗೂಡಿ ಸಮಯ ಕಳೆದರು. ಯೋಧರಿಗೆ ಸಿಹಿ ಹಂಚಿ ಕೆಲವರಿಗೆ ತಾವೇ ಸಿಹಿ ತಿನ್ನಿಸಿ ಶುಭಾಶಯ ಹೇಳಿದ್ದಾರೆ.

ಸಶಸ್ತ್ರ ಪಡೆಗಳ ಸೈನಿಕರ ನಡುವೆ ಸಮಯ ಕಳೆಯುವಾಗ ತಾನು ಶಕ್ತಿ ಪಡೆಯುತ್ತೇನೆ ಎಂದು ಅವರು ಹೇಳಿದ್ದಾರೆ. ಸದಾ ಕಾಲ ಸವಾಲಿನ ನಡುವೆ ಯೋಧರು ಕೆಲಸ ಮಾಡುತ್ತಾರೆ. ಯೋಧರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿರುತ್ತದೆ. ಯೋಧರೊಂದಿಗೆ ದೀಪಾವಳಿ ಆಚರಿಸಲು ನನಗೆ ಅವಕಾಶ ಕೊಟ್ಟಿದ್ದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಯೋಧರ ಸಮವಸ್ತ್ರದಲ್ಲಿಯೇ ಅವರು ದೀಪಾವಳಿ ಆಚರಿಸಿದ್ದು ವಿಶೇಷವಾಗಿತ್ತು. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...