alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಧರ ಜೊತೆ ಮೋದಿ ದೀಪಾವಳಿ: ಕೇದಾರನಾಥದಲ್ಲಿ ವಿಶೇಷ ಪೂಜೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತ-ಚೀನಾ ಗಡಿಯಲ್ಲಿ ಸೈನಿಕರ ಜೊತೆ ದೀಪಾವಳಿ ಆಚರಿಸಿದ್ದಾರೆ. ಬುಧವಾರ ಬೆಳಿಗ್ಗೆ ಹರ್ಶಿಲ್ ಬಾರ್ಡರ್ ಗೆ ಭೇಟಿ ನೀಡಿದ ಮೋದಿ, ಸೈನಿಕರ ಜೊತೆ ಹಬ್ಬ ಆಚರಿಸಿದ್ರು. ನಂತ್ರ ಕೇದಾರನಾಥಕ್ಕೆ ಭೇಟಿ ನೀಡಿದ ಮೋದಿ ಗರ್ಭಗುಡಿ ಪ್ರವೇಶ ಮಾಡಿ ಅಭಿಷೇಕ ಮಾಡಿದ್ರು,

ಕೇದಾರನಾಥ ದೇವಸ್ಥಾನಕ್ಕೆ ಪ್ರವೇಶ ಮಾಡುವ ಮೊದಲು ಮೋದಿ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದ್ರು. ನಿರ್ಮಾಣ ಕಾಮಗಾರಿ ಪ್ರಗತಿ ಬಗ್ಗೆ ಮಾಹಿತಿ ಕೇಳಿದ್ರು. ಕೇದಾರನಾಥನ ದರ್ಶನದ ನಂತ್ರ ಅಧಿಕಾರಿಗಳು ಫೋಟೋ ಮೂಲಕ ಮೋದಿಗೆ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದ್ರು.

ಗಡಿಯಲ್ಲಿ ಯೋಧರನ್ನು ಭೇಟಿ ಮಾಡಿದ ಮೋದಿ ಮಿಠಾಯಿ ನೀಡಿದ್ರು. ಜೊತೆಗೆ ವಿಶೇಷ ಉಡುಗೊರೆಯನ್ನು ಯೋಧರಿಗೆ ನೀಡಿದ್ರು. ಮೋದಿ ಜೊತೆ ಸೇನೆ ಪ್ರಮುಖರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ನರೇಂದ್ರ ಮೋದಿ ಸೈನಿಕರ ಭೇಟಿ ಬಗ್ಗೆ ಮಾಹಿತಿ ನೀಡಿದ್ದರು. ಸೈನಿಕರ ಜೊತೆ ದೀಪಾವಳಿ ಆಚರಿಸುತ್ತಿದ್ದೇನೆ. ಅದ್ರ ಫೋಟೋವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆಂದು ಮೋದಿ ಹೇಳಿದ್ದರು. ಬುಧವಾರ ರಾತ್ರಿ ಫೋಟೋ ಹಂಚಿಕೊಳ್ಳುವುದಾಗಿ ಮೋದಿ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...