alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ಮಲಾ ಸೀತಾರಾಮನ್ ಗೆ ರಕ್ಷಣೆಯ ಹೊಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟದ 13 ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ರು. ನಾಲ್ವರು ಮಂತ್ರಿಗಳಿಗೆ ಬಡ್ತಿ ಸಿಕ್ಕಿದ್ದು, ಕ್ಯಾಬಿನೆಟ್ ಹುದ್ದೆ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಮೋದಿ ಸರ್ಕಾರ ನೂತನವಾಗಿ ಆಯ್ಕೆಯಾದ ಸಚಿವರಿಗೆ ಖಾತೆ ಹಂಚಿಕೆ ಮಾಡಿದೆ. ಬಡ್ತಿ ಪಡೆದಿರುವ ನಿರ್ಮಲಾ ಸೀತಾರಾಮನ್ ಗೆ ರಕ್ಷಣಾ ಖಾತೆ ಜವಾಬ್ದಾರಿ ನೀಡಲಾಗಿದೆ. ನಿರ್ಮಲಾ ದೇಶದ ಎರಡನೇ ಮಹಿಳಾ ರಕ್ಷಣಾ ಸಚಿವೆಯಾಗಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ರಕ್ಷಣಾ ಖಾತೆ ನಿರ್ವಹಿಸಿದ್ದರು.

ಇನ್ನು ಸುರೇಶ್ ಪ್ರಭುಗೆ ವಾಣಿಜ್ಯ ಖಾತೆ ನೀಡಲಾಗಿದೆ. ಪಿಯೋಷ್ ಗೋಯೆಲ್ ರೈಲ್ವೆ ಖಾತೆ ಜವಾಬ್ದಾರಿ ಹೊರಲಿದ್ದಾರೆ. ಸ್ಮೃತಿ ಇರಾನಿಗೆ ಮಾಹಿತಿ ಮತ್ತು ಪ್ರಸಾರ ಹಾಗೂ ನಿತಿನ್ ಗಡ್ಕರಿಗೆ ಗಂಗಾ ಹಾಗೂ ಕೇಂದ್ರ ಜಲಸಂಪನ್ಮೂಲ ಖಾತೆ ಜವಾಬ್ದಾರಿ ನೀಡಲಾಗಿದೆ. ಉಮಾ ಭಾರತಿಗೆ ಕುಡಿಯುವ ನೀರು ನೈರ್ಮಲ್ಯ ಖಾತೆ ನೀಡಲಾಗಿದ್ದು, ಧರ್ಮೇಂದ್ರ ಪ್ರಧಾನ್ ಪೆಟ್ರೋಲಿಯಂ, ಕೌಶಲ್ಯಾಭಿವೃದ್ಧಿ ಹೆಚ್ಚುವರಿ  ಖಾತೆ ವಹಿಸಿಕೊಳ್ಳಲಿದ್ದಾರೆ. ಆಲ್ಫೋನ್ಸ್ ಕಣ್ಣಾಂತಾನಮ್ ಗೆ ಐಟಿ, ಪ್ರವಾಸೋದ್ಯಮ ಸ್ವತಂತ್ರ ಖಾತೆ ಹಾಗೂ ರಾಜ್ ಕುಮಾರ್ ಸಿಂಗ್ ಗೆ  ವಿದ್ಯುತ್, ಕಲ್ಲಿದ್ದಲು ಖಾತೆ, ಅನಂತ್ ಕುಮಾರ್ ಹೆಗಡೆಗೆ ಕೌಶಾಲ್ಯಾಭಿವೃದ್ಧಿ ಖಾತೆ ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...