alex Certify
ಕನ್ನಡ ದುನಿಯಾ       Mobile App
       

Kannada Duniya

ವಿವೇಕಾನಂದರ ಭಾಷಣ, ಆದರ್ಶಗಳನ್ನು ವಿದ್ಯಾರ್ಥಿಗಳ ಮುಂದಿಟ್ಟ ಪಿಎಂ

ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣಕ್ಕೆ ಇಂದು 125 ವರ್ಷವಾಗಿದೆ. ಇದ್ರ ಜೊತೆಗೆ ದೀನ್ ದಯಾಳ್ ಉಪಾಧ್ಯಾಯ ಜನ್ಮಶತಾಬ್ದಿ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದಾರೆ. ಯಂಗ್ ಇಂಡಿಯಾ- ನ್ಯೂ ಇಂಡಿಯಾ ಹೆಸರಿನಲ್ಲಿ ಮಾತನಾಡಿದ  ನರೇಂದ್ರ ಮೋದಿ ವಿವೇಕಾನಂದರ ಆದರ್ಶಗಳನ್ನು ಜನರ ಮುಂದಿಟ್ಟರು.

125 ವರ್ಷಗಳ ನಂತ್ರವೂ ವಿವೇಕಾನಂದರ ಭಾಷಣ ಚಿರಾಯು. ಆತ್ಮಗೌರವವನ್ನು ವಿವೇಕಾನಂದರು ಪ್ರತಿಪಾದಿಸಿದ್ದರು. ವಿವೇಕಾನಂದರ ವಿವಿಧ ರೂಪವನ್ನು ಅರ್ಥೈಸುವ ಅವಶ್ಯಕತೆಯಿದೆ. ವಿವೇಕಾನಂದರು ಈಗಿದ್ದಿದ್ದರೆ ಸ್ವಚ್ಛತೆ ಬಗ್ಗೆ ನಮಗೆ ಛಾಟಿ ಏಟು ನೀಡುತ್ತಿದ್ದರು ಎಂದು ಮೋದಿ ಹೇಳಿದ್ದಾರೆ.

ಸ್ವಚ್ಛತೆ ಬಗ್ಗೆ ಮಾತನಾಡಿದ ಮೋದಿ, ಮೊದಲು ಶೌಚಾಲಯ ನಂತ್ರ ದೇವಾಲಯ ಎಂದಿದ್ದಾರೆ. ಶೌಚಾಲಯವಿಲ್ಲದಿದ್ದರೆ ಮದುವೆಯಿಲ್ಲ. ನಮ್ಮ ದೇಶದ ನಾರಿಯರು ಬದಲಾಗ್ತಿದ್ದಾರೆ. ಅವ್ರ ಶಕ್ತಿ ಹೆಚ್ಚಾಗ್ತಿದೆ ಎಂದ ಮೋದಿ, ಸಫಾಯಿ ಕಾರ್ಮಿಕರಿಗೆ ಮೊದಲ ಹಕ್ಕಿದೆ. ಸ್ವಚ್ಛತೆ ನಮ್ಮ ಆದ್ಯತೆಯಾಗಬೇಕೆಂದ್ರು. ಯುವಕರು ಉದ್ಯೋಗ ಹುಡುಕುವಂತಾಗಬಾರದು. ಭಾರತೀಯ ಯುವಕರು ಉದ್ಯೋಗ ನೀಡುವಂತಾಗಬೇಕು. ನಮ್ಮ ಯುವಕರಲ್ಲಿ ಅಂತ ಶಕ್ತಿಯಿದೆ ಎಂದು ಮೋದಿ ಯುವಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...