alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಟಾದ ಅನಾಥ ಮಕ್ಕಳಿಗಾಗಿ ಮೋದಿ ಮಾಡಿದ್ದಾರೆ ಮಾದರಿ ಕೆಲಸ

pm-kota

ಕೋಟಾದ ಇಬ್ಬರು ಅನಾಥ ಮಕ್ಕಳಿಗೆ ಪ್ರಧಾನಿ ನರೇಂದ್ರ ಮೋದಿ ನೆರವಿನ ಹಸ್ತ ನೀಡಿದ್ದಾರೆ. ಪ್ರಧಾನಮಂತ್ರಿಗಳ ನಿಧಿಯಿಂದ ಇವರಿಗೆ 50,000 ರೂಪಾಯಿ ಕೊಟ್ಟು ಸಹಕರಿಸಿದ್ದಾರೆ. 17 ವರ್ಷದ ಸೂರಜ್ ಬಂಜಾರಾ ಮತ್ತು 9 ವರ್ಷದ ಸಹೋದರಿ ಸಲೋನಿ ಇಬ್ಬರೂ ಅನಾಥರು. ಇವರಿಗೆ ತಂದೆ-ತಾಯಿ ಇಲ್ಲ. ಅನಾಥಾಲಯವೊಂದರಲ್ಲಿ ವಾಸವಾಗಿದ್ದಾರೆ.

ಇವರ ಹೆತ್ತವರು ವಾಸವಿದ್ದ ಮನೆಯಲ್ಲಿ 96,500 ರೂಪಾಯಿ ಮೊತ್ತದ ನಿಷೇಧಿತ ಹಳೆ ನೋಟುಗಳು ಸಿಕ್ಕಿದ್ದವು. ಆದ್ರೆ ಅವುಗಳನ್ನು ಬದಲಾಯಿಸಿಕೊಳ್ಳಲು ಆರ್ ಬಿ ಐ ನೀಡಿದ್ದ ಗಡುವು ಮುಗಿದು ಹೋಗಿತ್ತು. ಹಣ ದೊರೆತಿದ್ದು ಮಾರ್ಚ್ 25ರ ನಂತರ. ಹಾಗಾಗಿ ಮುಂದೇನು ಅನ್ನೋ ಆತಂಕಕ್ಕೆ ಬಿದ್ದ ಅಣ್ಣ-ತಂಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ರು.

ಸಿಕ್ಕಿರುವ ಅಲ್ಪಹಣವನ್ನು ಕೂಡ ಕಳೆದುಕೊಳ್ಳುವಂಥಹ ಪರಿಸ್ಥಿತಿ ಎದುರಾಗಿದೆ ಅಂತಾ ವಿವರಿಸಿದ್ದರು. ಈ ಮಕ್ಕಳ ಕಷ್ಟವನ್ನು ಅರ್ಥಮಾಡಿಕೊಂಡ ಪ್ರಧಾನಿ ಮೋದಿ, ಜೂನ್ 6ರಂದು ಅವರಿಗೆ ಮರಳಿ ಪತ್ರ ಬರೆದಿದ್ದಾರೆ. ಅವರ ಖಾತೆಗೆ 50,000 ರೂಪಾಯಿ ಹಣ ಜಮಾ ಮಾಡಿಸಿದ್ದಾರೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಡಿಯಲ್ಲಿ ಇಬ್ಬರಿಗೂ ವಿಮೆಯನ್ನು ಕೂಡ ಮಾಡಿಸಿದ್ದಾರೆ.

ಸೂರಜ್ ಹಾಗೂ ಸಲೋನಿಯ ತಂದೆ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದ. 4 ವರ್ಷಗಳ ಹಿಂದೆ ತಾಯಿಯನ್ನು ಹತ್ಯೆ ಮಾಡಲಾಗಿತ್ತು. ನಂತರ ಅಣ್ಣ-ತಂಗಿ ಇಬ್ಬರೂ ಅನಾಥಾಲಯ ಸೇರಿದ್ದರು. ಮನೆಯಲ್ಲಿ 96,500 ರೂಪಾಯಿ ಹಣವನ್ನು ಅವರ ತಾಯಿಯೇ ಕೂಡಿಟ್ಟಿದ್ದಳು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...