alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಗುತ್ತಾ ಮೋದಿ ಪದವಿ ಕುರಿತ ದಾಖಲೆ..?

ಪ್ರಧಾನಿ ನರೇಂದ್ರ ಮೋದಿ ಅವರ ಪದmodiವಿ ಬಗ್ಗೆ ವಿವಾದ ಶುರುವಾಗಿದೆ. 1978ರಲ್ಲಿ ಮೋದಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಬಿಎ ಪದವಿ ಪೂರೈಸಿದ್ದರು. ಆದ್ರೆ ಮೋದಿ ಅವರ ಪದವಿ ನಕಲಿ ಅಂತಾ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ ನೀರಜ್ ಶರ್ಮಾ ಎಂಬುವವರು ಪ್ರಧಾನಿ ಮೋದಿ ಅವರ ಬಿಎ ಪದವಿ ಬಗ್ಗೆ ದಾಖಲೆ ನೀಡುವಂತೆ ಆರ್ ಟಿ ಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ 1978ರಲ್ಲಿ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳ ದಾಖಲೆಯನ್ನು ಒದಗಿಸುವಂತೆ ದೆಹಲಿ ಯೂನಿವರ್ಸಿಟಿಗೆ ಕೇಂದ್ರ ಮಾಹಿತಿ ಆಯೋಗ ಸೂಚಿಸಿದೆ. ಕಳೆದ ವರ್ಷ ಆರ್ ಟಿ ಐ ಅಡಿಯಲ್ಲಿ ಈ ದಾಖಲೆಗಳನ್ನು ನೀಡಲು ವಿಶ್ವವಿದ್ಯಾನಿಲಯ ನಿರಾಕರಿಸಿತ್ತು. ಆದ್ರೆ ಹಾಲಿ ಅಥವಾ ಮಾಜಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಪಟ್ಟ ವಿಚಾರ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದು ಅಂತಾ ಸೆಂಟ್ರಲ್ ಇನ್ಫಾರ್ಮೇಶನ್ ಕಮಿಷನ್ ಹೇಳಿದೆ.

ದೆಹಲಿ ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ಅಭಿಯಾನದಡಿ ಮೋದಿ ಪೊಲಿಟಿಕಲ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದಿರುವುದಾಗಿ ಬಿಜೆಪಿ ಸ್ಪಷ್ಟಪಡಿಸಿದೆ. ಆದ್ರೆ ಕೇಜ್ರಿವಾಲ್ ಅವರ ಆರೋಪದ ಹಿನ್ನೆಲೆಯಲ್ಲಿ 1978ರಲ್ಲಿ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳ ರೋಲ್ ನಂಬರ್, ಹೆಸರು, ತಂದೆಯ ಹೆಸರು, ಪಡೆದ ಅಂಕ ಸೇರಿದಂತೆ ಎಲ್ಲಾ ವಿವರವನ್ನು 2016ರ ಡಿಸೆಂಬರ್ 30ರೊಳಗೆ ಸಲ್ಲಿಸುವಂತೆ ದೆಹಲಿ ವಿವಿಗೆ ಸಿಐಸಿ ಸೂಚಿಸಿತ್ತು. ಆದ್ರೆ ವಿವಿಯಿಂದ ಇನ್ನೂ ಮಾಹಿತಿ ದೊರೆತಿಲ್ಲ ಅಂತಾ ಅರ್ಜಿದಾರ ನೀರಜ್ ಶರ್ಮಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...