alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ದಿನದಂದೇ ನಡೆದಿದೆ ಇಂಥಾ ದುರಂತ

ಹೈದ್ರಾಬಾದ್ ನಲ್ಲಿ ಮಕ್ಕಳ ದಿನಾಚರಣೆಯಂದೇ ತೆರೆದ ಸಂಪ್ ಒಂದು ಎರಡೂವರೆ ವರ್ಷದ ಮಗುವನ್ನು ಬಲಿ ಪಡೆದಿದೆ. ಆರ್ ಕೆ ನಗರದಲ್ಲಿರುವ ಬಚ್ಪನ್ ಪ್ಲೇ ಸ್ಕೂಲ್ ನಲ್ಲಿ ಈ ದುರಂತ ನಡೆದಿದೆ. ನಮ ಶಿವ ರಚಿತ್ ಮೃತಪಟ್ಟ ಬಾಲಕ. ಶಾಲೆಯ ನೆಲಮಹಡಿಯಲ್ಲಿದ್ದ ತೆರೆದ ಸಂಪ್ ನಲ್ಲಿ ಬಿದ್ದು ರಚಿತ್ ಸಾವನ್ನಪ್ಪಿದ್ದಾನೆ.

ತಾಯಿ ವಿಶಾಲಾ ಮಗನನ್ನು ಕರೆದೊಯ್ಯಲು ಶಾಲೆಗೆ ಬಂದಿದ್ರು. ಆದ್ರೆ ರಚಿತ್ ಶಾಲೆಯಲ್ಲಿ ಇರಲಿಲ್ಲ, ಆತ ಶಾಲೆಗೆ ಬಂದೇ ಇಲ್ಲ ಅಂತಾ ಶಿಕ್ಷಕರು ತಿಳಿಸಿದ್ದಾರೆ. ಕೂಡಲೇ ವಿಶಾಲಾ, ಆಕೆಯ ಪತಿ ಮತ್ತವರ ಸ್ನೇಹಿತರು ಜೊತೆಯಾಗಿ ರಚಿತ್ ಗಾಗಿ ಹುಡುಕಾಟ ನಡೆಸಿದ್ರು.

ಬಳಿಕ ತೆರೆದಿದ್ದ ಸಂಪ್ ನಲ್ಲಿ ರಚಿತ್ ಮೃತದೇಹ ಪತ್ತೆಯಾಗಿದೆ. ಶಾಲಾ ಸಿಬ್ಬಂದಿ ಸಂಪ್ ಮುಚ್ಚದೇ ಬಿಟ್ಟಿದ್ರಿಂದ್ಲೇ ಈ ದುರಂತ ಸಂಭವಿಸಿದೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ರಚಿತ್ ಮನೆಯಿಂದ ಕೇವಲ 400 ಮೀಟರ್ ದೂರದಲ್ಲಿ ಈ ಶಾಲೆಯಿದೆ.

ಮಗನನ್ನು ಗೇಟ್ ಬಳಿ ಬಿಟ್ಟ ತಂದೆ, ಆತ ಕಟ್ಟಡದೊಳಕ್ಕೆ ಪ್ರವೇಶಿಸುವವರೆಗೂ ನೋಡುತ್ತ ನಿಂತಿದ್ರು, ಬಳಿಕ ಮನೆಗೆ ತೆರಳಿದ್ದಾರೆ. 11.25ರ ವೇಳೆಗೆ ವಿಶಾಲ ಮಗನನ್ನು ಕರೆದೊಯ್ಯಲು ಬಂದಿದ್ರು. ಮಗು ಶಾಲೆಗೆ ಬಂದಿಲ್ಲ ಅಂತಾನೇ ಶಿಕ್ಷಕರು ವಾದಿಸಿದ್ದಾರೆ. ಆದ್ರೆ ರಚಿತ್ ಸ್ಕೂಲ್ ಬ್ಯಾಗ್ ಶಾಲೆಯ ಕೊಠಡಿಯಲ್ಲೇ ಇತ್ತು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...