alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆಯಿಂದ ಪಾಲಿಥಿನ್ ಬಳಸಿದ್ರೆ 5000 ರೂ. ದಂಡ

ಮಹಾರಾಷ್ಟ್ರದಲ್ಲಿ ಪಾಲಿಥಿನ್ ಬಳಕೆಗೆ ಇಂದು ಕೊನೆ ದಿನ. ಮಹಾರಾಷ್ಟ್ರದಲ್ಲಿ ಪಾಲಿಥಿನ್ ಬಳಕೆ ನಿಷೇಧಿಸಲಾಗಿದೆ. ನಾಳೆಯಿಂದ ಪಾಲಿಥಿನ್ ಬಳಸುವಂತಿಲ್ಲ. ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಪಾಲಿಥಿನ್ ನಿಷೇಧ ದೊಡ್ಡ ಪರಿಣಾಮ ಬೀರಲಿದೆ.

ಅಂಗಡಿ ಸೇರಿದಂತೆ ಯಾವುದೇ ನಾಗರಿಕನ ಕೈನಲ್ಲಿ ಪಾಲಿಥಿನ್ ಕಂಡು ಬಂದಲ್ಲಿ ಐದು ಸಾವಿರ ರೂಪಾಯಿಯವರೆಗೆ ದಂಡ ವಿಧಿಸಲಾಗುವುದು. ಎರಡನೇ ಬಾರಿ ಸಿಕ್ಕಿಬಿದ್ದಲ್ಲಿ 10 ಸಾವಿರ ಹಾಗೂ ಮೂರನೇ ಬಾರಿ ಸಿಕ್ಕಿಬಿದ್ದಲ್ಲಿ 25 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಜೊತೆಗೆ ಮೂರು ತಿಂಗಳು ಜೈಲು ಶಿಕ್ಷೆಯಾಗಲಿದೆ.

ಮಳೆಗಾಲದಲ್ಲಿ ಮುಂಬೈನಲ್ಲಿ ಪ್ರವಾಹ ಸಮಸ್ಯೆ ಸಾಮಾನ್ಯ. ಪ್ಲಾಸ್ಟಿಕ್ ಚರಂಡಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಕಾರಣ ನೀರು ಸರಾಗವಾಗಿ ಹರಿಯುವುದಿಲ್ಲ. ಮುಂಬೈ ಪರಿಸ್ಥಿತಿ ಸುಧಾರಿಸಲು ಬಿಎಂಸಿ ಪಾಲಿಥಿನ್ ಬಳಕೆ ನಿಷೇಧಕ್ಕೆ ಮುಂದಾಗಿದೆ. ಪರಿಶೀಲನೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ.

ಜನಸಾಮಾನ್ಯರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಬಿಎಂಸಿ ನಾಳೆ ಪ್ರದರ್ಶನವನ್ನೂ ಹಮ್ಮಿಕೊಂಡಿದೆ. ಪ್ಲಾಸ್ಟಿಕ್ ಬದಲು ಏನೆಲ್ಲ ಬಳಸಬಹುದು ಎನ್ನುವ ಬಗ್ಗೆ ಇದ್ರಲ್ಲಿ ಮಾಹಿತಿ ನೀಡಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...