alex Certify
ಕನ್ನಡ ದುನಿಯಾ       Mobile App
       

Kannada Duniya

ನಾಪತ್ತೆಯಾಗಿ 4 ದಿನಗಳಾದರೂ ಸಿಗದ ಸುಳಿವು

air force nm

ಚೆನ್ನೈನ ತಾಂಬರಮ್ ವಾಯುನೆಲೆಯಿಂದ ಶುಕ್ರವಾರ ಬೆಳಿಗ್ಗೆ ಅಂಡಮಾನ್ ಗೆ ಹೊರಟು ಬಂಗಾಳ ಕೊಲ್ಲಿಯಲ್ಲಿ ನಾಪತ್ತೆಯಾಗಿರುವ ವಾಯುಸೇನೆಯ ವಿಮಾನ ಇದುವರೆಗೂ ಪತ್ತೆಯಾಗಿಲ್ಲ. ವಿಮಾನ ಪತ್ತೆಗಾಗಿ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ರಕ್ಷಣಾ ಸಚಿವರೇ ಖುದ್ದಾಗಿ ಶೋಧ ಕಾರ್ಯದ ಮಾಹಿತಿ ಪಡೆದುಕೊಂಡಿದ್ದಾರೆ. ಇಸ್ರೋ ನೆರವನ್ನು ಪಡೆಯಲಾಗಿದ್ದು, ವಾಯು ಸೇನೆ, ನೌಕಾ ದಳ, ವಿಪತ್ತು ನಿರ್ವಹಣಾ ಸಿಬ್ಬಂದಿ, ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ನಿರಂತರವಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಇದುವರೆಗೂ ವಿಮಾನದ ಸುಳಿವು ಪತ್ತೆಯಾಗಿಲ್ಲ. ಜಲಾಂತರ್ಗಾಮಿ ನೌಕೆ ಸೇರಿದಂತೆ ಹಲವು ಹಡಗುಗಳು, ವಿಮಾನ ಕೊನೆಯ ಬಾರಿ ಸಂಪರ್ಕ ಕಡಿತಗೊಂಡ ಸ್ಥಳದ ವ್ಯಾಪ್ತಿಯಲ್ಲಿ ಶೋಧ ಕಾರ್ಯ ಕೈಗೊಂಡಿವೆ.

4 ದಿನಗಳಾದರೂ ಸಣ್ಣ ಸುಳಿವು ಸಿಗದ ಕಾರಣ, ವಿಮಾನ ಪತನವಾಗಿರಬಹುದು, ಅಜ್ಞಾತ ಸ್ಥಳಕ್ಕೆ ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೊನೆಯದಾಗಿ ಸಂಪರ್ಕ ಕಡಿತವಾದಾಗ 23,000 ಅಡಿ ಎತ್ತರದಲ್ಲಿ 1400 ಕಿಲೋ ಮೀಟರ್ ದೂರದಲ್ಲಿ ವಿಮಾನ ಇತ್ತು ಎನ್ನಲಾಗಿದೆ. ನಾಪತ್ತೆ ಪ್ರಕರಣ ನಿಗೂಢವಾಗಿಯೇ ಉಳಿದಿದ್ದು, ಶೋಧ ಕಾರ್ಯ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...