alex Certify
ಕನ್ನಡ ದುನಿಯಾ       Mobile App
       

Kannada Duniya

3 ದಿನವಾದರೂ ಪತ್ತೆಯಾಗದ ವಿಮಾನ

plane nm

ಚೆನ್ನೈನ ತಾಂಬರಂ ವಾಯುನೆಲೆಯಿಂದ ಪೋರ್ಟ್ ಬ್ಲೇರ್ ಗೆ ಹೊರಟಿದ್ದ ವಾಯುಪಡೆ ವಿಮಾನ ನಾಪತ್ತೆಯಾಗಿ 3 ದಿನವಾಗಿದ್ದು, ನಿರಂತರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಗಲು, ರಾತ್ರಿ ಶೋಧ ಕಾರ್ಯ ನಡೆದಿದ್ದು, ಇದುವರೆಗೂ ವಿಮಾನ ಪತ್ತೆ ಆಗಿಲ್ಲ.

ವಾಯುಪಡೆಯ ಎಂ.ಎನ್. -32 ವಿಮಾನ ಬಂಗಾಳ ಕೊಲ್ಲಿಯ ಮೇಲೆ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಪರ್ಕ ಕಡಿತಗೊಂಡಿತ್ತು. ಶುಕ್ರವಾರ ಬೆಳಿಗ್ಗೆಯಿಂದ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ವಾಯುಪಡೆ, ನೌಕಾಪಡೆ ಹಾಗೂ ಕರಾವಳಿ ಕಾವಲು ಪಡೆ, 18 ಹಡಗು, 8 ವಿಮಾನ, 1 ಜಲಾಂತರ್ಗಾಮಿ ನೌಕೆಯಿಂದ ಶೋಧ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮಳೆಯಾಗುತ್ತಿರುವುದರಿಂದ ಶೋಧ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ.

ವಿಮಾನದಲ್ಲಿ ಸಿಬ್ಬಂದಿ ಸೇರಿ 29 ಮಂದಿ ಇದ್ದು, ಅದರಲ್ಲಿ ಮಂಗಳೂರಿನ ಸೈನಿಕರೊಬ್ಬರು ಸೇರಿದ್ದಾರೆ ಎನ್ನಲಾಗಿದೆ. ಇಸ್ರೋ ಉಪಗ್ರಹದ ಚಿತ್ರಗಳಲ್ಲಿ ಕೆಲ ವಸ್ತುಗಳು ಬಂಗಾಳ ಕೊಲ್ಲಿಯಲ್ಲಿ ಗೋಚರಿಸಿವೆ ಎನ್ನಲಾಗಿದ್ದು, ಅವು ಕಂಡ ಬಂದ ಸ್ಥಳದಲ್ಲಿಯೂ ಹುಡುಕಾಟ ನಡೆಸಲಾಗಿದೆ. ರಕ್ಷಣಾ ಸಚಿವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...