alex Certify
ಕನ್ನಡ ದುನಿಯಾ       Mobile App
       

Kannada Duniya

ಬುದ್ದಿ ಉಪಯೋಗಿಸಿ ಕಡಿಮೆ ಖರ್ಚಿನಲ್ಲಿ ದೇಶ ಸುತ್ತಿ

ವಿಶ್ವ ಸುತ್ತಬೇಕೆಂಬ ಆಸೆ ಯಾರಿಗಿಲ್ಲ. ವಿದೇಶ ನೋಡಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಕೈನಲ್ಲಿ ಕಾಸಿಲ್ಲ ಎನ್ನುವ ಕಾರಣಕ್ಕೆ ಕನಸನ್ನು ಕಟ್ಟಿಡ್ತಾರೆ. ಸ್ವಲ್ಪ ಬುದ್ದಿ ಉಪಯೋಗಿಸಿದ್ರೆ ಕಡಿಮೆ ಖರ್ಚಿನಲ್ಲಿ ವಿದೇಶ ನೋಡಿ ಬರಬಹುದು.

ಮೊದಲನೇಯದಾಗಿ ಪ್ಲಾನಿಂಗ್ ಬಹಳ ಮುಖ್ಯ. ಮೊದಲು ಪ್ರವಾಸಕ್ಕೆ ಫಂಡ್ ಸಿದ್ಧ ಮಾಡಿಕೊಳ್ಳಿ. ಈಗ ಅನೇಕ ಬ್ಯಾಂಕ್ ಗಳು ಈ ಫಂಡ್ ಸೇವೆ ಶುರು ಮಾಡಿವೆ. ಆ ಬ್ಯಾಂಕ್ ಗಳು ಫಂಡ್ ನಲ್ಲಿ ಹಾಲಿ ಡೇ ಪ್ಯಾಕೇಜ್ ಯೋಜನೆಯನ್ನು ನೀಡುತ್ವೆ.

ವೀಸಾ ಇಲ್ಲದೆ ಯಾವೆಲ್ಲ ದೇಶಗಳನ್ನು ಸುತ್ತಬಹುದು ಎಂಬುದನ್ನು ಮೊದಲು ನೋಡಿ. ಆ ದೇಶಗಳ ಪಟ್ಟಿ ಮಾಡಿಕೊಳ್ಳಿ. ಮಾರಿಷಸ್, ಜೋರ್ಡಾನ್, ನೇಪಾಳ ಬಹಳ ಅಗ್ಗವಾಗಿದ್ದು ವೀಸಾ ಇಲ್ಲದೆ ನೀವು ದೇಶ ಸುತ್ತಬಹುದು.

ನೀವು ಪ್ರವಾಸಕ್ಕಾಗಿ ಬ್ಯಾಂಕ್ ನಿಂದ ಸಾಲ ಕೂಡ ಪಡೆಯಬಹುದು. ಕೆಲ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಪ್ರವಾಸದ ಸಾಲ ನೀಡ್ತಿವೆ. ಇಎಂಐ ಮೂಲಕ ಸಾಲ ತೀರಿಸಬಹುದಾ ಎಂಬುದನ್ನು ನೋಡಿ ಸಾಲ ಪಡೆಯಿರಿ.

ಟ್ರಾವೆಲ್ ಏಜೆನ್ಸಿಗಳ ಜೊತೆ ಕೂಡ ನೀವು ಮಾತುಕತೆ ನಡೆಸಬಹುದು. ಕೆಲ ಟ್ರಾವೆಲ್ ಏಜೆನ್ಸಿಗಳು ಬ್ಯಾಂಕ್ ಮೂಲಕ ಸಾಲ ಕೊಡಿಸಿ ಹಾಲಿಡೇ ಪ್ಯಾಕೇಜ್ ಟೂರ್ ಗೆ ಸಹಾಯ ಮಾಡುತ್ತವೆ. ಇನ್ನೂ ಕೆಲ ಟ್ರಾವೆಲ್ ಏಜೆನ್ಸಿಗಳು ಹಾಲಿಡೇ ಪ್ಯಾಕೇಜ್ ಟೂರ್ ಗಾಗಿ ಬೇರೆ ಬೇರೆ ಸ್ಕೀಂಗಳನ್ನು ಹೊಂದಿವೆ.

ನೀವು ಹೋಗುವ ದೇಶದ ಬಗ್ಗೆ ತಿಳಿದುಕೊಳ್ಳಿ. ಕಡಿಮೆ ಖರ್ಚಿನ ಹೊಟೇಲ್, ಒಳ್ಳೆ ಊಟ, ಕಡಿಮೆ ಖರ್ಚಾಗುವ ಪ್ರದೇಶಗಳ ಬಗ್ಗೆ ನಿಮಗೆ ಜ್ಞಾನವಿರಲಿ. ಯಾವುದೇ ಮಾಹಿತಿಯಿಲ್ಲದೆ ವಿದೇಶಕ್ಕೆ ಹೋಗುವ ತಪ್ಪು ಮಾಡಬೇಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...