alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಜ್ಜಾ ಆರ್ಡರ್ ಮಾಡುತ್ತೆ ಈ ಬೂಟು….

pizza-hut-580x395

ಪಿಜ್ಜಾ ಹಟ್ ತನ್ನ ಗ್ರಾಹಕರನ್ನು ಆಕರ್ಷಿಸಲು ಹೊಸ ಪ್ಲಾನ್ ಮಾಡಿದೆ. ಬಟನ್ ಒತ್ತಿದ್ರೆ ಸಾಕು ಪಿಜ್ಜಾ ಆರ್ಡರ್ ಮಾಡುವ ಬೂಟನ್ನು ಬಿಡುಗಡೆ ಮಾಡಿದೆ. ಈಗ ನೀವು ಡಿಜಿಟಲ್ ಸ್ಟೈಲಲ್ಲಿ ಪಿಜ್ಜಾ ಆರ್ಡರ್ ಮಾಡಬಹುದು. ‘ಪಿಜ್ಜಾ ಹಟ್ ಪೀ ಟಾಪ್ಸ್’ ಅನ್ನೋ ಬಾಸ್ಕೆಟ್ ಬಾಲ್ ಬೂಟುಗಳಲ್ಲಿ ಸ್ಮಾರ್ಟ್ ಬಟನ್ ಹಾಗೂ ಬ್ಲೂಟೂತ್ ಇದೆ.

ಆ ಬಟನ್ ಕ್ಲಿಕ್ ಮಾಡ್ತಿದ್ದಂತೆ ಬಳಕೆದಾರರ ಮೊಬೈಲ್ ನಲ್ಲಿರೋ ಆಪ್ ಜೊತೆಗೆ ಕನೆಕ್ಟ್ ಆಗಲಿದೆ, ನಿಮ್ಮ ಆರ್ಡರ್ ಕೂಡ ಪ್ಲೇಸ್ ಆಗುತ್ತದೆ. ದೆಹಲಿಯ ಎನ್ ಸಿ ಎ ಎ ಜೊತೆ ಪಾಲುದಾರಿಕೆ ಮಾಡಿಕೊಂಡು ಈ ಬೂಟುಗಳನ್ನು ಬಿಡುಗಡೆ ಮಾಡಲಾಗಿದೆ.

ಮುಂಬರುವ ಟೂರ್ನಿಗಳಲ್ಲಿ ಈ ಶೂ ಧರಿಸಿದವರೆಲ್ಲ ಆರಾಮಾಗಿ ಪಿಜ್ಜಾ ಆರ್ಡರ್ ಮಾಡಬಹುದು. ಎನ್ ಸಿ ಎ ಎ ಕಾಲೇಜಿನ ಟೂರ್ನಿಗಳನ್ನು ಸಾಕಷ್ಟು ಜನರು ವೀಕ್ಷಿಸ್ತಾರೆ, ಆ ಸಮಯದಲ್ಲಿ ಪಿಜ್ಜಾ ತಿನ್ನಲು ಇಷ್ಟಪಡ್ತಾರೆ. ಅವರಿಗೆಲ್ಲ ಈ ಹೊಸ ಟೆಕ್ನಾಲಜಿ ನೆರವಾಗಲಿದೆ ಅಂತಾ ಪಿಜ್ಜಾ ಹಟ್ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...