alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ಹಯ್ಯಾ ಕುಮಾರ್ ಗೆ ಭದ್ರತೆ ಹೆಚ್ಚಿಸಿದ ಪೊಲೀಸರು

Kanhaiya Kumar_1ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಹಾಗೂ ಕಾಶ್ಮೀರಿ ಗೇಟ್ ನಡುವೆ ಸಂಚರಿಸುವ ದೆಹಲಿ ರಸ್ತೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ದೊರೆತ ಬ್ಯಾಗ್ ಒಂದರಲ್ಲಿ ದೇಶಿ ನಿರ್ಮಿತ ಪಿಸ್ತೂಲು ಹಾಗೂ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಗೆ ಬರೆಯಲಾದ ಕೊಲೆ ಬೆದರಿಕೆ ಪತ್ರ ದೊರೆತ ಹಿನ್ನಲೆಯಲ್ಲಿ ಕನ್ಹಯ್ಯಾಗೆ ನೀಡಿದ್ದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಅನಾಮಧೇಯ ಬ್ಯಾಗ್ ಕಂಡು ಬಂದ ಹಿನ್ನಲೆಯಲ್ಲಿ ಅದನ್ನು ಪರಿಶೀಲಿಸಿದ್ದ ಬಸ್ ಚಾಲಕ ಪಿಸ್ತೂಲ್ ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದ. ಆಗ ಪಿಸ್ತೂಲಿನ ಜೊತೆಯಲ್ಲಿ ಕನ್ಹಯ್ಯಾ ಕುಮಾರ್ ಗೆ ಬರೆಯಲಾಗಿದ್ದ ಜೀವ ಬೆದರಿಕೆ ಪತ್ರವೂ ದೊರೆತಿತ್ತು.

ಹೀಗಾಗಿ ಕನ್ಹಯ್ಯಾ ಕುಮಾರ್ ಗೆ ನೀಡಲಾಗಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜೊತೆಗೆ ಈ ಬ್ಯಾಗ್ ಇಟ್ಟವರಾರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಕನ್ಹಯ್ಯಾ ಕುಮಾರ್ ಗೆ ಈಗಾಗಲೇ ಹಲವು ಬಾರಿ ಕೊಲೆ ಬೆದರಿಕೆ ಪತ್ರ ಬಂದಿರುವ ಬೆನ್ನಲ್ಲೇ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಗೆ ಹೋಗುವ ಬಸ್ ನಲ್ಲಿ ಪಿಸ್ತೂಲು ದೊರೆತಿರುವುದು ಆತಂಕವನ್ನುಂಟು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...